ಕಾರವಾರ: ಧರೆ ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಣಸೇಕೊಪ್ಪದಲ್ಲಿ ಮಂಗಳವಾರ ನಡೆದಿದೆ.
ಮಂಜುನಾಥ ಗಣಪ ಗೌಡ 58 ಮೃತ ವ್ಯಕ್ತಿಯಾಗಿದ್ದು , ಇವರು ತೋಟದಲ್ಲಿ ನುಗ್ಗುತಿದ್ದ ಮಳೆ ನೀರನ್ನು ಬಿಡಿಸಿಕೊಡುತ್ತಿರುವಾಗ ಏಕಾ ಏಕಿ ಭೂಕುಸಿತ ಸಂಭವಿಸಿದೆ. ಕುಸಿದ ಮಣ್ಣಿನಲ್ಲಿ ಸಿಲುಕಿ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.