ಬೆಂಗಳೂರು: ಇದು ರೀಲ್ ಅಲ್ಲ. ರಿಯಲ್. ಬೆಂಗಳೂರಿನ ಕೋರಮಂಗಲ ಠಾಣೆಯ ಪೊಲೀಸರು ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಹೈ ಪ್ರೊಫೈಲ್ ಕಿಡ್ನಾಪ್ ಕೇಸ್ ಬೇಧಿಸಿದ್ದಾರೆ.
ಏನಿದು ಪ್ರಕರಣ..?
ಆಗಸ್ಟ್‌ನಲ್ಲಿ ಬೆಂಗಳೂರಿನ ಟೆಕ್ಕಿ ವಿನೀತ್ ಎಂಬವರನ್ನು ಅಪಹರಣ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿದ ಕೋರಮಂಗಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯ ಅಖಾಡಕ್ಕೆ ಧುಮುಕಿದ್ದಾರೆ. ‘ಸಿಂಗಂ’ ರೀತಿ ನಡೆದ ಅಪಹರಣಕ್ಕೆ ಪೊಲೀಸರು ಸಿನಿಮೀಯ ರೀತಿಯಲ್ಲೇ ಕ್ಲೈಮ್ಯಾಕ್ಸ್ ಕೊಟ್ಟಿದ್ದಾರೆ. ಇಲ್ಲಿ ಟೆಕ್ಕಿಗಳ ಟೀಮ್ ಮತ್ತೊಬ್ಬ ಟೆಕ್ಕಿಯನ್ನು ಕಿಡ್ನಾಪ್ ಮಾಡಿದ್ದು ಅಪಹರಣ ತಂಡದವರೆನ್ನಲಾದ ಮೂವರನ್ನು ಪೊಲೀಸರು ಖೆಡ್ಡಕ್ಕೆ ಕೆಡವಿದ್ದಾರೆ.
ಬೆಂಗಳೂರಿನಲ್ಲಿದ್ದ ಟೆಕ್ಕಿ ವಿನೀತ್ ವರ್ಧನ್‌ನನ್ನು ಕೇಡಿಗಳ ಗುಂಪು ಅಪಹರಣ ಮಾಡಿತ್ತು. ತಮಿಳುನಾಡು ಗಡಿ ತಲುಪುವಷ್ಟರಲ್ಲಿ ಕಿಡ್ನಾಪರ್‌ಸ್ ಫೋನ್ ಆಫ್ ಮಾಡಿದ್ದರು. ಬಳಿಕ ವಿನೀತ್‌ನನ್ನು ಚೆನ್ನೈನತ್ತ ಕರೆದೊಯ್ದಿದ್ದರು. ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಫಾಸ್ಟ್ ಟ್ಯಾಗ್ ಸುಳಿವಾಧರಿಸಿ ಅಪಹರಣಕಾರರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ವಿನೀತ್‌ನ ಪರಿಚಿತ ಟೆಕ್ಕಿಗಳೇ ಈ ಕಿಡ್ನಾಪ್ ಕೃತ್ಯ ನಡೆಸಿರುವುದು ಅಚ್ಚರಿ ಹಾಗೂ ಕುತೂಹಲದ ಸಂಗತಿ.
5 ಕೋಟಿ ರೂಪಾಯಿ ದೋಚಲು ಕಿಡ್ನಾಪ್ ಮಾಡಲು ಸ್ಟಾರ್ಟಪ್ ಕಂಪನಿ ಎಂಡಿ ಎಡ್ವಿನ್‌ನನ್ನೊಳಗೊಂಡ ಟೀಂ ಸಂಚು ರೂಪಿಸಿತ್ತೆನ್ನಲಾಗಿದೆ. ಪಾರ್ಟಿ ಮಾಡುವ ನೆಪದಲ್ಲಿ ವಿನೀತ್‌ನನ್ನು ಕಿಡ್ನಾಪ್ ಮಾಡಿ, ವಿನೀತ್‌ನ ಬ್ಯಾಂಕ್ ಖಾತೆಯಲ್ಲಿದ್ದ ಹಣ ದೋಚುವ ಪ್ರಯತ್ನ ನಡೆದಿತ್ತೆನ್ನಲಾಗಿದೆ.
ಆಗಸ್ಟ್‌ನಲ್ಲಿ ವಿನೀತ್‌ನನ್ನು ಕಿಡ್ನಾಪ್, ಸೆಪ್ಟೆಂಬರ್‌ನಲ್ಲಿ ಕ್ಲೈಮ್ಯಾಕ್ಸ್ ತಲುಪಿದೆ. ಪ್ರಕರಣ ದಾಖಲಿಸಿದ ಕೋರಮಂಗಲ ಠಾಣಾ ಪೊಲೀಸರು ಟೆಕ್ಕಿಗಳಾದ
ಎಡ್ವಿನ್ ಪ್ರಶಾಂತ್, ಸಂತೋಷ್ ಸಹಿತ ಮೂವರನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.