ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶ ಗೊಂದಲದ ಗೂಡಾಗಿ ಪರಿಣಮಿಸಿತು. ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತೆಯರ ಪ್ರತಿಭಟನೆಯಿಂದ ಕೆರಳಿದ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆಯೇ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ರೌದ್ರಾವತಾರ ತೋರಿದ ಪ್ರಸಂಗ ನಡೆದಿದೆ.
📍Karnataka | #Watch: Siddaramaiah’s Slap Gesture At Cop After He Loses Cool On Stage
Read more: https://t.co/KrY7F8PTEz pic.twitter.com/p3rG6KfN49
— NDTV (@ndtv) April 28, 2025
ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಂತೆಯೇ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕಪ್ಪು ಪಟ್ಟಿ ಪ್ರದರ್ಶಿಸಿ, ‘ಪಾಕಿಸ್ಥಾನ ಜೊತೆ ಯುದ್ಧ ಬೇಡ’ ಎಂಬ ಸಿಎಂ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಹಲವರನ್ನು ಮಹಿಳೆಯರ ವಶಕ್ಕೆ ಪಡೆದರು.
ಈ ಒಟ್ಟಾರೆ ಬೆಳವಣಿಗೆಯಿಂದ ಕುಪಿತರಾದ ಸಿದ್ದರಾಮಯ್ಯ, ಸ್ಥಳದಲ್ಲಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮಗೆ ಅವರನ್ನು ವೇದಿಕೆಗೆ ಕರೆಸಿ ತರಾಟೆಗೆ ತೆಗೆದುಕೊಂಡರು. ಸಿಟ್ಟಿನಲ್ಲೇ ಪೊಲೀಸ್ ಅಧಿಕಾರಿಯತ್ತ ಕೈ ಎತ್ತಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ವರ್ತನೆಗೆ ಬಿಜೆಪಿ ಆಕ್ರೋಶ
ಮುಖ್ಯಮಂತ್ರಿಗಳು ಸಮವಸ್ತ್ರದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ, ಹತಾಶೆಯಿಂದ ಆರ್ಭಟಿಸಿ ಕೈ ಮಾಡಲು ಮುಂದಾಗಿರುವ ಕ್ರಮ ಮುಖ್ಯಮಂತ್ರಿ ಸ್ಥಾನದ ಘನತೆಗೆ ಧಕ್ಕೆ ತಂದ ಗೂಂಡಾ ವರ್ತನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮುಂದೆ ದರ್ಪ ಪ್ರದರ್ಶಿಸಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ತನ್ನ ‘X’ ಖಾತೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದೆ. ‘ನಿಮ್ಮ ದರ್ಪ ದೌಲತ್ತು ದುರಹಂಕಾರದಿಂದಲೇ ರಾಜ್ಯದ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಪೊಲೀಸರ ಮೇಲಿನ ನಿಮ್ಮ ದರ್ಪ ಕಡಿಮೆ ಆಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಪೊಲೀಸ್ ಠಾಣೆಗಳು ಕೆಪಿಸಿಸಿ ಕಚೇರಿಗಳಾಗಿ ಬದಲಾಗಿವೆ. ರಾಜ್ಯದ ದಕ್ಷ ಪೊಲೀಸರು ಕಾಂಗ್ರೆಸ್ ಸರ್ಕಾರದ ಈ ತುಘಲಕ್ ದರ್ಬಾರ್ ಅನ್ನು ಸಹಿಸುಕೊಳ್ಳುವ ಅಗತ್ಯೆ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಪ್ರಕಾರ ಕೆಲಸ ಮಾಡಿ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮಿಸ್ಟರ್ @siddaramaiah ಅವರೇ, ನಿಮ್ಮ ದರ್ಪ ದೌಲತ್ತು ದುರಹಂಕಾರದಿಂದಲೇ ರಾಜ್ಯದ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಪೊಲೀಸರ ಮೇಲಿನ ನಿಮ್ಮ ದರ್ಪ ಕಡಿಮೆ ಆಗಿಲ್ಲ.@INCKarnataka ಅಧಿಕಾರಕ್ಕೆ ಬಂದ ದಿನದಿಂದ ಪೊಲೀಸ್ ಠಾಣೆಗಳು ಕೆಪಿಸಿಸಿ ಕಚೇರಿಗಳಾಗಿ ಬದಲಾಗಿವೆ. ರಾಜ್ಯದ ದಕ್ಷ ಪೊಲೀಸರು ಕಾಂಗ್ರೆಸ್… pic.twitter.com/ePhZIp5GFm
— BJP Karnataka (@BJP4Karnataka) April 28, 2025