ಶಿವಮೊಗ್ಗ: ನೂತನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಜೆಪಿ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರಿಡುವ ಬಗ್ಗೆ ಬಿಜೆಪಿಯಿಂದ ತಯಾರಿ ನಡೆದಿದೆ. ಆದರೆ ಈ ಹೆಸರಿನ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಯಡಿಯೂರಪ್ಪ, ಈ ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡುವಂತೆ ಸಲಹೆ ಮಾಡಿದ್ದಾರೆ.
ಈ ಕುರಿತಂತೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ತೀರ್ಮಾನ ಮಾಡಿದ್ದೇವೆ ಎಂದರು.
ಕುವೆಂಪು ಅವರು ಜ್ಞಾನಪೀಠ ಪಡೆದ ಮೊದಲ ಕನ್ನಡಿಗ ಆಗಿದ್ದಾರೆ. ಅವರು ವಿಶ್ವ ಮಾನವ ಸಂದೇಶವನ್ನ ಸಾರಿದವರು. ಹಾಗಾಗಿ ಕುವೆಂಪು ಹೆಸರಿಸಿಡುವುದು ಸೂಕ್ತ ಎಂದ ಅವರು, ಈ ಬಗ್ಗೆ ಸದನದಲ್ಲಿ ನಾನೇ ಮಂಡಿಸುವೆ. ಅಧಿವೇಶನದಲ್ಲಿ ತೀರ್ಮಾನವನ್ನ ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರಕ್ಕ ಕಳುಹಿಸಲಾಗುತ್ತದೆ ಎಂದರು.