ಮುಂಬೈ: ಕೆಲವು ವರ್ಷಗಳ ಹಿಂದೆ ಪ್ರಗತಿಪರರನ್ನು ಮೆಚ್ಚಿಸಲು ಹಿಂದೂ ಸಂಘಟನೆಗಳ ವಿರುದ್ದ ಧ್ವನಿ ಎತ್ತಿದ್ದ ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ‘ಅಸಹನೆ’ಯ ಪ್ರಸ್ತಾಪ ಮಾಡಿದ್ದರು. ಆ ಮೂಲಕ ಜಗತ್ತಿನಾದ್ಯಂತ ಭಾರತದ ಬಗ್ಗೆಯೇ ಅನುಮಾನ ಮೂಡಿಸುವಂತಿತ್ತು ನಟ ಶಾರೂಖ್ ನಡೆ. ಇದೀಗ ಅದೇ ಶಾರೂಖ್ ಕುಟುಂಬ ಡ್ರಗ್ಸ್ ಮಾಫಿಯಾದ ನಂಟಿನ ಆರೋಪ ಹೊತ್ತಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಂಬೈ ಸಮೀಪ ಸಮುದ್ರ ಮಧ್ಯದಲ್ಲಿ ವಿಲಾಸಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆದಿದ್ದು ಅಲ್ಲಿಗೆ ಲಗ್ಗೆ ಹಾಕಿದ್ದ ಎನ್‌ಸಿಬಿ ತಂಡ ಡ್ರಗ್ಸ್ ದಂಧೆಯ ಕರಾಳತೆಯನ್ನು ಅನಾವರಣ ಮಾಡಿದೆ. ಡ್ರಗ್ ಪಾರ್ಟಿ ನಡೆಯುತ್ತಿದ್ದ ಹಡಗಿನ ಮೇಲೆ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳ ತಂಡ ಹಲವರನ್ನು ಬಂಧಿಸಿದೆ. ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ನನ್ನೂ ವಶಕ್ಕೆ ಪಡೆದಿದೆ.
‘ದಿ ಎಂಪ್ರಸ್’ ಎಂಬ ಹಡಗು ಶನಿವಾರ ರಾತ್ರಿ ಮುಂಬೈನಿಂದ ಗೋವಾಕ್ಕೆ ತೆರಳುತ್ತಿತ್ತು. ಈ ಹಡಗಿನೊಳಗೆ ಡ್ರಗ್ಸ್ ಪಾರ್ಟಿ ನಡೆಸಲಾಗುತ್ತಿತ್ತು. ಈ ಡ್ರಗ್ ಪಾರ್ಟಿ ಬಗ್ಗೆ ಸುಳಿವು ಅರಿತ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಹೈ ಪ್ರೊಫೈಲ್ ವ್ಯಕ್ತಿಗಳು ಎನ್ನಲಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪುತ್ರ ಕೂಡಾ ಈ ರೇವ್ ಪಾರ್ಟಿಯಲ್ಲಿದ್ದ ಎನ್ನಲಾಗಿದೆ.