ಕಲಬುರಗಿ: ಸೇಡಂ ತಾಲೂಕಿನ ಸಿಮೆಂಟ್ ಕಾರ್ಖಾನೆಯ ಅಂಗಳದಲ್ಲಿ ನಡೆದಿದೆ ಎನ್ನಲಾಗಿರುವ ಅಮಾನವೀಯ ಘಟನೆ ದುರದೃಷ್ಟಕರ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಶರಣ್ ಪ್ರಕಾಶ್ ಆರ್. ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೃತ ಕಾರ್ಮಿಕನನ್ನು ಆತನ ಜೊತೆಯಲ್ಲೇ ಕೆಲಸ ಮಾಡುವ ಇತರೆ ಕಾರ್ಮಿಕರು
ಪ್ರಾಣಿಗಳಂತೆ ಹೊತ್ತೈದಿರುವ ಘಟನೆ ಅಮಾನವೀಯ. ಈ ಕುರಿತು ತನಿಖೆ ನಡೆಸಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ.. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ಆರು ಜನರನ್ನು ಪೊಲೀಸರು ಬಂಧಿಸಲಾಗಿದೆ ಎಂದರು.
ಅದಲ್ಲದೆ ಸೇಡಂ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ರೈಲ್ವೆ ಟ್ರ್ಯಾಕ್ ನಿಂದಾಗಿ ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಹೋಗುತ್ತಿದ್ದ ವ್ಯಕ್ತಿ ಅವರು ಮಾರ್ಗಮದ ಸಾವನ್ನಪ್ಪಿದ ಘಟನೆಗೆ ಹಿನ್ನೆಲೆಯಲ್ಲಿ ಕೂಡಲೇ ಶಿಫ್ಟ್ ಮಾಡುವಂತೆ ಈಗಾಗಲೇ ರೈಲ್ವೆ ಇಲಾಖೆಗೆ ತಿಳಿಸಲಾಗಿದೆ. ರೈಲ್ವೆ ಇಲಾಖೆ ಗಂಭೀರತೆಯನ್ನು ಅರಿತಿದೆ. ಅದು ಕೂಡ ಒಪ್ಪಿಗೆ ಸೂಚಿಸಿದೆ. ಆದ್ದರಿಂದ ಶೀಘ್ರವೇ ರೈಲು ಹಳಿ ಪಟ್ಟಣದ ಮಧ್ಯದಿಂದ ಹೊರವಲಯಕ್ಕೆ ಶಿಫ್ಟ್ ಆಗಲಿದೆ ಎಂದರು.