ಮೈಸೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದೆಬ್ಬಿಸಿರುವ ಸ್ಯಾಂಟ್ರೋ ರವಿಯನ್ನು ರಾಜ್ಯ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ವಂಚನೆ ಆರೋಪ ಎದುರಿಸುತ್ತಿರುವ ಸ್ಯಾಂಟ್ರೋ ರವಿ ವರ್ಗಾವಣೆ ದಂಧೆಯಲ್ಲೂ ಭಾಗಿಯಾಗಿರುವ ಅರೋಪ ಕೇಳಿಬರುತ್ತಿದೆ. ಈ ನಡುವೆ, ಮೈಸೂರಿನಲ್ಲಿ ದಾಖಲಾಗಿರುವ ಪ್ರಕರಣವನ್ನಾಧರಿಸಿ ಮಂಜುನಾಥ್ ಅಲಿಯಾಸ್ ಎನ್ನಲಾದ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಹನ್ನೊಂದು ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿ ಕೊಳ್ಳುತ್ತಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
Santro Ravi case is blot on Police Transfer System. We knew though PEB is established it is MLAs who send “Notes with names of officers” for transfers. It is shocking now that dealers post officers and collect money.
— Girish Bharadwaj (@Girishvhp) January 13, 2023
ಬಂಧಿತ ಸ್ಯಾಂಟ್ರೋ ರವಿ ವಿರುದ್ಧದ ಆರೋಪಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ತಪ್ಪಿತಸ್ಥನಾಗಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಿ ಸಂತ್ರಸ್ತ ವ್ಯಕ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆಯ ಆರೋಪವೂ ಪ್ರತಿಧ್ವನಿಸಿದೆ. ಸ್ಯಾಂಟ್ರೋ ರವಿ ಹೆಸರು ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕುಟುಂಬದ ಜೊತೆ ಆತನಿಗೆ ನಂಟು ಇತ್ತು ಎಂದು ಕಾಂಗ್ರೆಸ್ ಆರೋಪಿಸಿತ್ತು.
ಸ್ಯಾಂಟ್ರೋ ರವಿಗೆ
◆ಸಿಎಂ ಪುತ್ರ "ಸ್ವೀಟ್ ಬ್ರದರ್"
◆ ಸಿಎಂ "ಅಪ್ಪಾಜಿ"ಇಷ್ಟೊಳ್ಳೆ ನೆಂಟಸ್ತಿಕೆ ಇದ್ದರೂ ಸ್ಯಾಂಟ್ರೋ ರವಿ ನನಗೆ ತಿಳಿದೇ ಇಲ್ಲ ಎನ್ನುವ @BSBommai ಅವರೇ,
ನಿಮ್ಮ ಮಾತನ್ನು ದೇವರು ಮೆಚ್ಚುತ್ತಾನಾ?!@narendramodi ಅವರೇ, ಚೀಫ್ ಬ್ರೋಕರ್ ನೇಮಿಸಿ ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿರುವ ಬಗ್ಗೆ ಮೌನವೇಕೆ?#ModiMouna pic.twitter.com/zrYCiSwKud— Karnataka Congress (@INCKarnataka) January 12, 2023
ಆತ ಗೃಹ ಸಚಿವ ಅರಗ ಜ್ಞನೇಂದ್ರ ಅವರೊಂದಿಗೂ ಒಡನಾಟ ಹೊಂದಿದ್ದ ಎಂದು ಕಾಂಗ್ರೆಸ್ ಆರೋಪಿಸಿದೆ. ಈತ ವರ್ಗಾವಣೆ ದಂಧೆ ನಡೆಸುತ್ತಿದ್ದ ಎಂದು ಬೊಟ್ಟು ಮಾಡುತ್ತಿತ್ತು. ಈ ಸಂಬಂಧ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು.
ಗೃಹಸಚಿವರ ವರ್ಗಾವಣೆ ಆದೇಶ ಪತ್ರವೊಂದಕ್ಕೆ ಸ್ಯಾಂಟ್ರೋ ರವಿ ಸಂಭ್ರಮಿಸಿದ್ದಾನೆ.
ಆತನ ವರ್ಗಾವಣೆ ದಂಧೆಯಲ್ಲಿ ಗೃಹಸಚಿವ @JnanendraAraga ಅವರ ಸಂಪೂರ್ಣ ಸಹಬಾಗಿತ್ವ, ಸಹಕಾರವಿರುವುದು ಸ್ಪಷ್ಟ.@BJP4Karnataka ಸರ್ಕಾರದ ಭ್ರಷ್ಟಾಚಾರಕ್ಕೆ ಖುಲ್ಲಂಖುಲ್ಲಾ ಸಾಕ್ಷ್ಯವಿದ್ದರೂ 'ನಾ ಖಾನೆದುಂಗಾ' ಎನ್ನುವ #ModiMouna ಏಕೆ? pic.twitter.com/J6iB2jxpdz
— Karnataka Congress (@INCKarnataka) January 12, 2023
ಈ ನಡುವೆ, ಸ್ಯಾಂಟ್ರೋ ರವಿಯ ಬಂಧನ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನದೇ ದಾಟಿಯಲ್ಲಿ ಪ್ರತಿಕ್ರಿಯಿಸಿದೆ. ಸರ್ವ ಸಾಕ್ಷಿಗಳನ್ನೂ ನಾಶಪಡಿಸಿದ ನಂತರ ಸರ್ಕಾರದ ಚೀಫ್ ಬ್ರೋಕರ್, ಬಿಜೆಪಿ ಮುಖಂಡ ಸ್ಯಾಂಟ್ರೋ ರವಿಯ ಬಂಧನದ ನಾಟಕ ನಡೆಯುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಸ್ಯಾಂಟ್ರೋ ರವಿಯನ್ನು ಗುಜರಾತಿನಲ್ಲಿ ಬಂಧಿಸಿದ್ದಾರಂತೆ! ಆತ ಗುಜರಾತಿಗೆ ಹೋಗಿದ್ದೇಕೆ? ಎಲ್ಲಾ ಬಗೆಯ ದಂಧೆಕೋರರಿಗೂ ಗುಜರಾತ್ ಪ್ರಿಯವಾಗುವುದೇಕೆ? ಇದು ಗುಜರಾತ್ ಮಾಡೆಲ್ ಪ್ರಭಾವವೇ? ಎಂದು ಪ್ರಶ್ನಿಸಿರುವ ವೈಖರಿ ಗಮನಸೆಳೆದಿದೆ.
ಸರ್ವ ಸಾಕ್ಷಿಗಳನ್ನೂ ನಾಶಪಡಿಸಿದ ನಂತರ ಸರ್ಕಾರದ ಚೀಫ್ ಬ್ರೋಕರ್, ಬಿಜೆಪಿ ಮುಖಂಡ ಸ್ಯಾಂಟ್ರೋ ರವಿಯ ಬಂಧನದ ನಾಟಕ ನಡೆಯುತ್ತಿದೆ.
ಸ್ಯಾಂಟ್ರೋ ರವಿಯನ್ನು ಗುಜರಾತಿನಲ್ಲಿ ಬಂಧಿಸಿದ್ದಾರಂತೆ! ಆತ ಗುಜರಾತಿಗೆ ಹೋಗಿದ್ದೇಕೆ? ಎಲ್ಲಾ ಬಗೆಯ ದಂಧೆಕೋರರಿಗೂ ಗುಜರಾತ್ ಪ್ರಿಯವಾಗುವುದೇಕೆ?
ಇದು ಗುಜರಾತ್ ಮಾಡೆಲ್ ಪ್ರಭಾವವೇ @BJP4Karnataka?
— Karnataka Congress (@INCKarnataka) January 13, 2023


























































