ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೊಸ ಚಿತ್ರ ‘ಟಾಕ್ಸಿಕ್’. ಕೆಜಿಎಫ್ ನಂತರದ ಯಶ್ ಅವರ ಮೆಗಾ ಪ್ರಾಜೆಕ್ಟ್ ಇದಾಗಿದ್ದು ನೂತನ ಸಿನಿಮಾ ‘ಟಾಕ್ಸಿಕ್’ನ ಟೈಟಲ್ ಅನಾವರಣವಾಗಿದೆ.
ಯಶ್ ಅಭಿನಯದ 19ನೇ ಸಿನಿಮಾ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಇದೀಗ ಹೊಸ ಸಿನಿಮಾದ ಟೈಟಲ್ ಬಹಿರಂಗವಾಗಿದೆ. ಈ ಹೊಸ ಸಿನಿಮಾ ಸ್ಯಾಂಡಲ್‌ವುಡ್ ಮಾತ್ರವಲ್ಲ ವಿಶ್ವಾದ್ಯಂತ ಗಮನಸೆಖೆಯಬಲ್ಲ ಮೆಗಾ ಪ್ರಾಜೆಕ್ಟ್ ಎಂದು ಹೇಳಲಾಗುತ್ತಿದೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮಾಡುವ ತಯಾರಿಯಲ್ಲಿರುವ ಚಿತ್ರ ತಂಡ ಶುಕ್ರವಾರ ಬೆಳಿಗ್ಗೆ ದೇಶ ವಿದೇಶಗಳಲ್ಲಿ ಈ ಟೈಟಲ್ ಬಿಡುಗಡೆ ಮಾಡಿದೆ.