ಬೆಂಗಳೂರು: ಬಿರು ಬೇಸಿಗೆಯ ಬಿಸಿಲ ಹೊಡೆತದಿಂದ ಜನ ಹೈರಾಣಾಗಿದ್ದಾರೆ. ಕರ್ನಾಟಕದಲ್ಲಿ ಬೇಸಿಗೆ ಧಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳ ತಾಪಮಾನ ದಶಕಗಳಲ್ಲೇ ದಾಖಲೆ ಎಂಬಂತಿದೆ.
ಶುಕ್ರವಾರ ದಾಖಲೆ ಎಂಬಂತೆ ತಾಪಮಾನ ಇತ್ತು. ಅದರಲ್ಲೂ ಉದ್ಯಾನ ನಗರಿ ಬೆಂಗಳೂರು ಕೂಡಾ ಬಿಸಿಲಿನಿಂದ ತತ್ತರಿಸಿತ್ತು.
ಮಾರ್ಚ್ 29ರನ್ನು 36.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಶನಿವಾರ 36.6 ಡಿಗ್ರಿ ತಾಪಮಾನ ದಾಖಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲೇ ದಾಖಲೆಯಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.
ಈ ನಡುವೆ ಈ ಮಾಸಾಂತ್ಯದಲ್ಲಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಕಳೆದ ವಾರವೂ ಇದೇ ರೀತಿಯ ಮುನ್ಸೂಚನೆ ವ್ಯಕ್ತವಾಗಿತ್ತಾದರೂ ಮಳೆಯಾಗಲಿಲ್ಲ. ಪ್ರಸಕ್ತ ಬಿಸಿಲ ಝಳವನ್ನು ನೋಡಿದಾಗ ಮಳೆಯಾಗುವ ಸಾಧ್ಯತೆವಿದೆಯೇ ಎಂಬ ಅನುಮಾನವನ್ನು ಜನ ವ್ಯಕ್ತಪಡಿಸುತ್ತಿದ್ದಾರೆ.