ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆಯವರು ಪುನರಾಯ್ಕೆ ಆಗಿದ್ದಾರೆ.
ನಾಗಪುರದ ರೇಶಿಂಬಾಗ್ ನ ಸ್ಮೃತಿಭವನದಲ್ಲಿ ಮಾರ್ಚ್ 15 – 17ರವರೆಗೆ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಬೈಠಕ್ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಅವರ ಪುನರಾಯ್ಕೆ ಮಾಡಲಾಗಿದೆ.
Nagpur (March 17, 2024): The RSS Akhil Bharatiya Pratinidhi Sabha (ABPS) re-elected (2024-2027) Shri Dattatreya Hosabale ji for the post of Sarkaryavah. He has been discharging the responsibility of Sarkaryavah since 2021. pic.twitter.com/CjsWrtH9UT
— RSS (@RSSorg) March 17, 2024
ದತ್ತಾತ್ತೇಯ ಹೊಸಬಾಳೆ ಪರಿಚಯ
‘ದತ್ತಾಜೀ’ ಎಂದೇ ಸಂಘ ಪರಿವಾರ ವಲಯದಲ್ಲಿ ಚಿರಪರಿಚಿತರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಇವರ ಹುಟ್ಟೂರು. ಡಿಸೆಂಬರ್ 1, 1954ರಲ್ಲಿ ಜನನ . 1968ರ ವೇಳೆ ವಿದ್ಯಾರ್ಥಿ ದೆಸೆಯಿಂದಲೇ ಆರೆಸ್ಸೆಸ್ ಮತ್ತು ಎಬಿವಿಪಿ ಜೊತೆ ನಿಕಟ ಬಾಂಧವ್ಯ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿದ್ದಾರೆ.
1975ರ ತುರ್ತುಪರಿಸ್ಥಿತಿ ವಿರೋಧಿಸಿ ಹೋರಾಡಿ ಮೀಸಾ ಕಾನೂನಿನ ಅನ್ವಯ 2 ವರ್ಷ ಸೆರೆಮನೆ ವಾಸ ಅನುಭವಿಸಿದ್ದರು. ಬಿಡುಗಡೆಯಾದ ಬಳಿಕ, ಆರೆಸ್ಸೆಸ್‌ನ ಪ್ರಮುಖರಾದ ಹೊ.ವೆ.ಶೇಷಾದ್ರಿ ಅವರೊಂದಿಗೆ ತುರ್ತುಪರಿಸ್ಥಿತಿ ಹೋರಾಟದ ಕುರಿತ ಉದ್ಗ್ರಂಥ ‘ಭುಗಿಲು’ ರಚನೆಯಲ್ಲಿ ಸಹಭಾಗಿತ್ವ ವಹಿಸಿದ್ದರು.1978ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನ ಪೂರ್ಣಾವಧಿ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿಗಳ ನಿರ್ವಹಣೆ. ವಿದ್ಯಾರ್ಥಿ ಆಂದೋಲನಕ್ಕೆ ಹೆಜ್ಜೆ ಗುರುತುಗಳಾಗಬಹುದಾದ ಹಲವು ಕೊಡುಗೆಗಳನ್ನು ನೀಡಿದ್ದಾರೆ. ವಿಶ್ವ ವಿದ್ಯಾರ್ಥಿ ಹಾಗೂ ಯುವ ಸಂಘಟನೆಯಾಗಿರುವ WOSYನ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರು.
2002ರಲ್ಲಿ ದತ್ತಾಜೀ ಅವರಿಗೆ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಹೊಣೆಗಾರಿಕೆ. 2009ರಲ್ಲಿ ಸಂಘದ ಸಹಸರಕಾರ್ಯವಾಹರಾಗಿ ಜವಾಬ್ದಾರಿ. 2021 ರಲ್ಲಿ ಸಂಘದ ಸರಕಾರ್ಯವಾಹರಾಗಿ ಆಯ್ಕೆಯಾಗಿದ್ದರು. ಈಗ ಮತ್ತೊಮ್ಮೆ 2024ರಲ್ಲಿ, ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಸರಕಾರ್ಯವಾಹರ ಚುನಾವಣೆ ಪ್ರಕ್ರಿಯೆಯಲ್ಲಿ ಸರಕಾರ್ಯವಾಹರಾಗಿ ಆಯ್ಕೆಯಾಗಿದ್ದಾರೆ.
ನಿರಂತರ ಅಧ್ಯಯನಶೀಲ ಪ್ರವೃತ್ತಿ, ಉಪನ್ಯಾಸ-ಸಂವಾದಗಳ ಮೂಲಕ ವೈಚಾರಿಕ ವಲಯದಲ್ಲಿಯೂ ಪ್ರಸಿದ್ಧಿಯನ್ನು ಪಡೆದಿದ್ದಾರೆ.