ಮುಂಬೈ: ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗಿದ್ದಾರಂತೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ‘ಪುಷ್ಪ’ ನಟಿ, ಸೋಮವಾರ (ಜುಲೈ 22) ತಮ್ಮ ಬಹುನಿರೀಕ್ಷಿತ ಘೋಷಣೆಯನ್ನು ಬಹಿರಂಗಪಡಿಸಲಿದ್ದಾರಂತೆ.
“…ಬಿಡುಗಡೆಯಾಗಲಿದೆ… ನಾನು ತುಂಬಾ, ತುಂಬಾ, ತುಂಬಾ ಉತ್ಸುಕಳಾಗಿದ್ದೇನೆ… ಮತ್ತು ಎಷ್ಟೋ ನರ್ವಸ್ ಕೂಡಾ!” ಎಂದು ರಶ್ಮಿಕಾ ತಮ್ಮ ಪೋಸ್ಟಿನಲ್ಲಿ ಹೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ವೀಡಿಯೊದ ಮೂಲಕ ಭಾವೋದ್ರಿಕ್ತವಾಗಿ ಮಾತನಾಡಿದ ರಶ್ಮಿಕಾ, “ನಾನು ಈ ಘೋಷಣೆಗೆ ಸಂಬಂಧಿಸಿದಂತೆ ಈ ವೀಡಿಯೊವನ್ನು ಮಾಡುತ್ತಿದ್ದೇನೆ ಎಂಬುದೇ ನನಗೆ ನಂಬಲಾಗುತ್ತಿಲ್ಲ. ಇದು ಒಂದು ಸಾಮಾನ್ಯ ಯೋಜನೆಯಲ್ಲ, ನನ್ನ ಹೃದಯಕ್ಕೆ ಅತೀ ಹತ್ತಿರವಾದುದು. ನೀವು ಕಳೆದ ಹಲವಾರು ವರ್ಷಗಳಿಂದ ನೀಡಿದ ಪ್ರೀತಿಗೆ ನಾನು ಇದನ್ನು ಅರ್ಪಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
View this post on Instagram
ಈಗಾಗಲೇ ರಶ್ಮಿಕಾ ಅವರು “ಹೊಸ ವ್ಯವಹಾರವನ್ನು ಆರಂಭಿಸುತ್ತಿದ್ದಾರೆ” ಎಂಬ ಸುಳಿವನ್ನೂ ನೀಡಿದ್ದು, ಇತ್ತೀಚೆಗೆ ತಮ್ಮ ತಾಯಿಯೊಂದಿಗೆ ನಡೆಸಿದ ಸಂಭಾಷಣೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “…ನಾನು ಒಂದು ಮುಖ್ಯ ವಿಷಯ ಚಿತ್ರೀಕರಣ ಮಾಡಲಿದ್ದೇನೆ. ನಾನು ಪ್ರಾರಂಭಿಸುತ್ತಿರುವ ಈ ವ್ಯವಹಾರಕ್ಕಾಗಿ” ಎಂದು ಹೇಳಿರುವ ರಶ್ಮಿಕಾಗೆ ತಾಯಿ ಪ್ರೋತ್ಸಾಹ ನೀಡಿದ್ದಾರೆ. “ನೀವು ಒಳ್ಳೆಯದನ್ನು ಮಾಡುತ್ತೀರಿ, ನೀವು ಒಳ್ಳೆಯದನ್ನು ಪಡೆಯುತ್ತೀರಿ” ಎಂಬ ಮಾತುಗಳೊಂದಿಗೆ ತಾಯಿ ಆಶೀರ್ವಾದ ನೀಡಿದ್ದಾರೆ.
ತಾಯಿಯ ಪ್ರಭಾವವನ್ನು ವಿವರಿಸುತ್ತಾ, “ಅಮ್ಮ ಯಾವಾಗಲೂ ಮೊದಲು ತಿಳಿದುಕೊಳ್ಳುತ್ತಾರೆ… ಅವರ ಮಾತುಗಳು ಮಂಜಿನ ಗಾಜನ್ನು ಸ್ವಚ್ಛಗೊಳಿಸುವ ವೈಪರ್‌ನಂತೆ. ಮುನ್ನಡೆಯುವ ದಾರಿಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಅವರ ಅನುಮೋದನೆ ಸಿಕ್ಕಾಗ, ನಾನು ಸರಿಯಾದ ದಾರಿಯಲ್ಲಿದ್ದೇನೆ ಎಂದು ಭಾವಿಸುತ್ತೇನೆ” ಎಂದು ನಟಿ ಹೃದಯಸ್ಪರ್ಶಿ ಮಾತುಗಳನ್ನು ಬರೆದಿದ್ದಾರೆ.