ಉಡುಪಿ: ಅಯೋಧ್ಯೆಯಲ್ಲಿನ ಶ್ರೀ ರಾಮ ದೇಗುಲ ಭಕ್ತಿ ಕೈಂಕರ್ಯಕ್ಕೆ ಮುಕ್ತವಾಗಿದೆ. ವೈಭವೋಪೇತ ಪೂಜಾ ವಿಧಿ ವಿಧಾನಗಳೊಂದಿಗೆ ರಾಮಲಲ್ಲಾನ ವಿಗ್ರಹ ಪರಿಷ್ಠಾಪನೆ ನಡೆದಿದ್ದು ಈ ಸಂದರ್ಭದಲ್ಲಿ ದೇಶದೆಲ್ಲೆಡೆ ರಾಮೋತ್ಸವ ಆಚರಿಸಲಾಯಿತು.
ಇತ್ತ ಕರ್ನಾಟಕದಲ್ಲೂ ರಾಮೋತ್ಸವ ಸಡಗರ ಕಂಡುಬಂತು. ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ರಾಜ್ಯದ ದೇಗುಲಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಬೇಕೆಂದು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ನಿರ್ದೇಶನ ನೀಡಿದ್ದರು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಲ್ಲಿ ಇಂದು ವಿಶೇಷ ಕೈಂಕರ್ಯಗಳು ಗಮನಸೆಳೆದವು.
ನಾಡಿನ ಪ್ಉಖ ದೇವಾಲಯಗಳಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಳ, ಶ್ರೀ ಪೊಳಲಿ ರಾಜರಾಜೇಶ್ವರಿ ದೇವಾಲಯ ಸಹಿತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಹೋಮ-ಹವನಗಳಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.