ದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದೆಯೊಬ್ಬರು ಮಹಿಳಾ ಭದ್ರಾತಾ ಸಿಬ್ಬಂದಿಯನ್ನು ಎಳೆದಾಡಿದ್ದಾರೆಂಬ ಸುದ್ದಿ ರಾಷ್ಟ್ರ ರಾಜಕಾರಣದಲ್ಲಿ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.
ಬುಧವಾರ ನಡೆದ ಕಲಾಪದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಪಕ್ಷದ ನಾಯಕರು ಅಬ್ಬರಿಸುತ್ತಿದ್ದಾಗ, ಕಾಂಗ್ರೆಸ್ ಸದಸ್ಯೆ ಛಾಯಾ ವರ್ಮಾ ಕೂಡಾ ಸದನದ ಬಾವಿಗಿಳಿದು ಸಿಟ್ಟು ವ್ಯಕ್ತ ಪಡಿಸಿದ್ದಾರೆ. ಈ ಗದ್ದಲ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ನಿಯುಕ್ತಿಯಾಗಿದ್ದ ಮಹಿಳಾ ಮಾರ್ಷಲ್‌ರನ್ನು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯೆ ಎಳೆದಾಡಿದ ದೃಶ್ಯ ಸಿಸಿಟಿವಿ ಫೂಟೇಜ್ ಮೂಲಕ ಅನಾವರಣವಾಗಿದೆ.
ಈ ಘಟನೆ ಕುರಿತಂತೆ ಆಡಳಿತಾರೂಢ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ನಾಯಕರು ಕೂಡಾ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.