ನವದೆಹಲಿ: ರಾಜ್ಯಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವಾಗಿ ಮಾರ್ಪಟ್ಟಿದೆ. ಕರ್ನಾಟಕದಿಂದ ಆಯ್ಕೆ ನಡೆಯಲಿದ್ದು ಅಭ್ಯಥಿಗಳು ಯಾರಾಗ್ತಾರೆ ಎಂಬುದೇ ಕುತೂಹಲದ ಸಂಗತಿ.
ಈವರೆಗೂ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡವುವ ಬಗ್ಗೆ ಚರ್ಚೆಗಳು ಸಾಗಿವೆ. ಆದರೆ ಲಿಂಗಾಯತ ಸಮುದಾಯವನ್ನು ಓಲೈಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗೆ ಇರುವುದರಿಂದಾಗಿ ವಿ.ಸೋಮಣ್ಣ ಅವರನ್ನು ರಾಜ್ಯಸಭೆಗೆ ಕಳುಹಿಸಿಕೊಡುವ ಚಿಂತನೆ ನಡೆಸದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ನಡುವೆ, ಲೋಕಸಭಾ ಚುನಾವಣೆ ಮತ್ತು ರಾಜ್ಯಸಭಾ ಚುನಾವಣೆ ಸಿದ್ಧತೆ, ಹುರಿಯಾಳುಗಳ ಆಯ್ಕೆ ಸಂಬಂಧ ದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೈಕಮಾಂಡ್ ನಾಯಕರ ಜೊತೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯದ ನೂತನ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾಗಿರುವ ವಿಜಯೇಂದ್ರ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಸಂಬಂಧದ ಫೋಟೋಗಳನ್ನು ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಂಡಿದ್ದಾರೆ.
Had a fruitful meeting with senior Union Minister for Parliamentary Affairs, Coal, and Mines Shri @JoshiPralhad ji in New Delhi.
Alongside our party leaders we deliberated on preparations aligning our efforts to ensure success across all fronts.
ಕೇಂದ್ರ ಸಂಸದೀಯ ವ್ಯವಹಾರ,… pic.twitter.com/atWY4pZ6mC
— Vijayendra Yediyurappa (Modi Ka Parivar) (@BYVijayendra) February 9, 2024


























































