ನವದೆಹಲಿ: ವಿದ್ಯುನ್ಮಾನ ಮತಯಂತ್ರ (EVM) ಬಗ್ಗೆ ಇದೀಗ ಮತ್ತೆ ಅಪಸ್ವರ ಎದ್ದಿದೆ. ಇವಿಎಂ ಅನ್ನು ಹ್ಯಾಕ್ ಮಾಡಬಹುದೆಂಬ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹೇಳಿಕೆ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ.
ನಾವು ವಿದ್ಯುನ್ಮಾನ ಮತ ಯಂತ್ರಗಳನ್ನು ನಿರ್ಮೂಲನೆ ಮಾಡಬೇಕಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಮೂಲಕವೂ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದಲ್ಲಿ ಈ ಸಾಧ್ಯತೆ ಇದ್ದರೂ ಕೂಡಾ, ಚುನಾವಣಾ ಫಲಿತಾಂಶದಲ್ಲಿ ಅದು ದೊಡ್ಡ ಪರಿಣಾಮ ಬೀರಬಲ್ಲದು ಎಂದು ಎಲಾನ್ ಮಸ್ಕ್ ಪ್ರತಿಪಾದಿಸಿದ್ದಾರೆ.
ಮಸ್ಕ್ ಅವರ ಹೇಳಿಕೆಗೆ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೇರಿಕಾ ಚುನಾವಣೆಗೆ ಮುನ್ನ ವಿದ್ಯನ್ಮಾನ ಮತಯಂತ್ರಗಳನ್ನು ನಿಷೇಧಿಸಬೇಕಿದೆ ಎಂಬ ಮಸ್ಕ್ ವಾದಕ್ಕೆ ವಿದೇಶಗಳಲ್ಲಷ್ಟೇ ಅಲ್ಲ, ಭಾರತದಲ್ಲೂ ಬೆಂಬಲ ವ್ಯಕ್ತವಾಗಿದೆ.
ಈ ನಡುವೆ, ಎಲಾನ್ ಮಸ್ಕ್ ಅಭಿಪ್ರಾಯವನ್ನು ತಳ್ಳಿಹಾಕಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ‘ಯಾರೂ ಸುರಕ್ಷಿತ ಡಿಜಿಟಲ್ ಯಂತ್ರಾಂಶವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಎಲನ್ ಮಸ್ಕ್ ಅವರ ದೃಷ್ಟಿಕೋನವು ಅಮೆರಿಕ ಮತ್ತು ಇತರ ಸ್ಥಳಗಳಿಗೆ ಅನ್ವಯಿಸಬಹುದು – ಅಲ್ಲಿ ಅವರು ಇಂಟರ್ನೆಟ್ ಸಂಪರ್ಕಿತ ಮತದಾನ ಯಂತ್ರಗಳನ್ನು ನಿರ್ಮಿಸಲು ನಿಯಮಿತ ಕಂಪ್ಯೂಟ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ. ಆದರೆ ಭಾರತೀಯ ಇವಿಎಂಗಳು ಕಸ್ಟಮ್ ವಿನ್ಯಾಸ, ಸುರಕ್ಷಿತ ಮತ್ತು ಯಾವುದೇ ನೆಟ್‌ವರ್ಕ್ ಅಥವಾ ಮಾಧ್ಯಮದಿಂದ ಪ್ರತ್ಯೇಕವಾಗಿರುತ್ತವೆ. ಇಲ್ಲಿನ ಯಂತ್ರಗಳಿಗೆ ಬಾಹ್ಯ ಸಂಪರ್ಕವಿಲ್ಲ. ಬ್ಲೂಟೂತ್, ವೈಫೈ, ಇಂಟರ್ನೆಟ್ ಇಲ್ಲ. ಅಂದರೆ ಯಾವುದೇ ಮಾರ್ಗವಿಲ್ಲ. ಫ್ಯಾಕ್ಟರಿ ಪ್ರೋಗ್ರಾಮ್ ಮಾಡಲಾದ ನಿಯಂತ್ರಕಗಳನ್ನು ಪುನರುತ್ಪಾದಿಸಲು ಸಾಧ್ಯವಿಲ್ಲ’ ಎಂದು ರಾಜೀವ್ ಚಂದ್ರಶೇಖರ್ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿ ಬಲವಾಗಿ ವಾದಿಸಿದ್ದಾರೆ.
This is a huge sweeping generalization statement that implies no one can build secure digital hardware. Wrong. @elonmusk ‘s view may apply to US n other places – where they use regular compute platforms to build Internet connected Voting machines.
But Indian EVMs are custom… https://t.co/GiaCqU1n7O
— Rajeev Chandrasekhar 🇮🇳 (@RajeevRC_X) June 16, 2024