ರಾಯಚೂರು: ರಾಯಚೂರು ಜಿಲ್ಲೆಯ ಅಮರಪುರ ಬಳಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ತೆಲಂಗಾಣದ ಹಿಂದೂಪುರ ನಿವಾಸಿಗಳಾದ 28 ವರ್ಷದ ನಾಗರಾಜ್, 38 ವರ್ಷದ ಸೋಮು, 36 ವರ್ಷದ ನಾಗಭೂಷಣ್ ಮತ್ತು 38 ವರ್ಷದ ಮುರಳಿ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನು ಇಂಗ್ಲಿಷ್‘ನಲ್ಲೂ ಓದಿ..
![]()
Raichur: Four from Telangana killed in road accident
ಪೊಲೀಸರ ಪ್ರಕಾರ, ಮೃತರು ಸರಕು ವಾಹನದಲ್ಲಿ ಕುರಿ ಜಾತ್ರೆಗೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಕಡೆಗೆ ಪ್ರಯಾಣಿಸುತ್ತಿದ್ದರು. ಅತಿ ವೇಗದ ಚಾಲನೆಯಿಂದಾಗಿ, ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಪ್ಯಾರಪೆಟ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮವಾಗಿ, ಸರಕು ವಾಹನದ ಮುಂಭಾಗದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಚಾಲಕ ಆನಂದ್ ಗಂಭೀರ ಗಾಯಗೊಂಡಿದ್ದು, ಅವರನ್ನು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಗೆ ದಾಖಲಿಸಲಾಗಿದೆ.
ಅಪಘಾತ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಗಾಯಾಳು ಶಹಾಪುರ ಪಟ್ಟಣದ ಜಾತ್ರೆಯಿಂದ ಕುರಿಗಳನ್ನು ಖರೀದಿಸಲು ಹೋಗುತ್ತಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.