ನವದೆಹಲಿ: ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ಗೋಲ್ಮಾಲ್ ವಿಚಾರ ಮುಂದಿಟ್ಟು ಮೋದಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
#WATCH | Leader of Opposition in Lok Sabha, Rahul Gandhi says, “NEET students spend years and years preparing for their exam. Their family supports them financially, and emotionally and the truth is that NEET students today do not believe in the exam because they are convinced… pic.twitter.com/j6VcLq3i99
— ANI (@ANI) July 1, 2024
ವೈದ್ಯಕೀಯ ಪ್ರವೇಶ ಸಂಬಂಧದ ‘NEET’ ಪರೀಕ್ಷೆ ಎಂಬುದು ವ್ಯಾಪಾರೀಕರಣವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೀಟ್ ಪರೀಕ್ಷೆಯನ್ನು ಶ್ರೀಮಂತರ ಮಕ್ಕಳಿಗೆ ತಕ್ಕಂತೆ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ 10 ವರ್ಷಗಳಲ್ಲಿ ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರ ಸದ್ದೇ ಹೆಚ್ಚಿತ್ತು. ಆದರೆ ಇದೀಗ ಕಾಲ ಬದಲಾಗಿದೆ ಎಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಕ್ರೋಶ, ವಾಗ್ದಾಳಿ ಮೂಲಕ ಗೊತ್ತಾಗಿದೆ. ಲೋಕಸಭೆಯಲ್ಲಿ ಸೋಮವಾರ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ಮಾತನಾಡಿದ ರಾಹುಲ್ ಗಾಂಧಿ ನೀಟ್ ಅಕ್ರಮ ವಿಚಾರವನ್ನು ಮುಂದಿಟ್ಟು ಎನ್ಡಿಎ ಸರ್ಕಾರವನ್ನು ತನ್ನ ಮೊನಚು ಮಾತುಗಳಿಂದ ತಿವಿದರು.
ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ. ಅವರ ಕುಟುಂಬದವರು ಆರ್ಥಿಕವಾಗಿಯೂ, ಭಾವನಾತ್ಮಕವಾಗಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುತ್ತಾರೆ. ಆದರೆ ಈಗಿನ ಪರಿಸ್ಥಿತಿ ಗಮನಿಸಿ ‘ನೀಟ್’ ಪರೀಕ್ಷೆಯನ್ನು ವಿದ್ಯಾರ್ಥಿಗಳು ನಂಬುವಂತಿಲ್ಲ ಎಂದರು. ನೀಟ್ ಪರೀಕ್ಷೆಯನ್ನು ಶ್ರೀಮಂತರ ಮಕ್ಕಳಿಗೆ ತಕ್ಕಂತೆ ರೂಪಿಸಲಾಗುತ್ತಿದೆ ಎಂದು ದೂರಿದರು.