ದೆಹಲಿ: ರೈತ ಹೋರಾಟ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಹೋರಾಟ ದೇಶದ ರೈತರ ಸಮಸ್ಯೆ ಹೋರಾಟ. ಈ ಸಮಸ್ಯೆ ಬಗೆಹರಿಸುತನಕ ಹೋರಾಟ ನಡೆಸುವುದಾಗಿ ರಾಹುಲ್ ಗಾಂಧಿ ಭರವಸೆ ಭರವಸೆ ನೀಡಿದ್ದಾರೆ.
ಸಂಸತ್ ಭವನದ ಕಚೇರಿಯಲ್ಲಿ ಇಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಕಿಸಾನ್ ಮಜದೂರ್ ಮೋರ್ಚಾ ಸಂಘಟನೆಯ ರೈತ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ದೇಶಾದ್ಯಂತ ರೈತ ಸಂಘಟನೆಗಳು ವಿರೋಧ ಪಕ್ಷದ ಸಂಸದರಿಗೆ ಖಾಸಗಿ ಮಸೂದೆ ಮಂಡಿಸುವಂತೆ ಒತ್ತಾಯ ಪತ್ರ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧೀ ಅವರು, ರೈತ ನಾಯಕರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಮಾಹಿತಿ ಪಡೆದರು.
ರಾಷ್ಟ್ರೀಯ ರೈತ ಮುಖಂಡರಾದ ಪಂಜಾಬನ ಜಗಜಿತ್ ಸಿಂಗ್ ದಲೈವಾಲಾ, ಹರಿಯಾಣದ ಅಭಿಮನ್ಯುಕೂಹರ್. ಕರ್ನಾಟಕದ ಕುರುಬೂರ್ ಶಾಂತಕುಮಾರ್, ತಮಿಳುನಾಡಿನ ಪಾಂಡ್ಯನ್. ತೆಲಂಗಾಣದ ವೆಂಕಟೇಶ್ವರ ರಾವ್.ಲಕ್ವಿನ್ಧರ್ ಸಿಂಗ್. ಕಿಸಾನ್ ಮಜದೂರ್ ಮೋರ್ಚಾ ಪಾಂಡರ್ ಮತ್ತಿತರ ವಿವಿಧ ರಾಜ್ಯಗಳ 12 ರೈತ ಮುಖಂಡರು ನಿಯೋಗದಲ್ಲಿದ್ದರು. ಈ ಸಂದರ್ಭದಲ್ಲಿ MSP ಗ್ಯಾರಂಟಿ ಕಾನೂನನ ಬಗ್ಗೆ ದೇಶದ ರೈತರ ಕೃಷಿ ಸಾಲ ಮನ್ನ ಮಾಡುವ ಬಗ್ಗೆ ಚರ್ಚಿಸಿದರು ಸಂಸತ್ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸುವಂತೆ ರೈತ ನಾಯಕರು ಮನವಿ ಮಾಡಿದರು.
ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ರಾಹುಲ್ ಗಾಂಧಿ, ಈ ಬಗ್ಗೆ ಇಂಡಿಯಾ ಒಕ್ಕೂಟ ಸಭೆಯಲ್ಲಿ ಚರ್ಚಿಸಿ ಸಂಸತ್ ಅಧಿವೇಶನದಲ್ಲಿ ಖಾಸಗಿ ಬಿಲ್ ಮಂಡಿಸುವುದಾಗಿ ಇಡೀ ದೇಶದ ರೈತರ ಪರವಾದ MSP ಗ್ಯಾರಂಟಿ ಕಾನೂನು ಜಾರಿಗೆ ತರುವ ತನಕ, ಸ್ವಾಮಿನಾಥನ್ ವರದಿ ಜಾರಿ ಮಾಡುವ ತನಕ ರೈತರ ಸಾಲ ಮನ್ನ ಮಾಡುವ ತನಕ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಸದರಾದ ವೇಣುಗೋಪಾಲ್ ಜಯರಾಮ್ ರಮೇಶ್. ಲೂಧಿಯಾನ ಸಂಸದರಾಜು ಮತ್ತು ಇತರ ಹಲವು ಸಂಸದರು ಉಪಸ್ಥಿತರಿದ್ದರು.