ಶಾಲಾ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದಲ್ಲಿ ಅವಾಂತರಗಳು ಸೃಷ್ಟಿಯಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ರಾಯಬರೇಲಿಯ ಶಾಲಾ ವಾಹನವೊಂದಲ್ಲಿ ಹೆಬ್ಬಾವು ಪ್ರತ್ಯಕ್ಷವಾದ ಸನ್ನಿವೇಶ ಆತಂಕ ಸೃಷ್ಟಿಸಿತ್ತು..
ಲಕ್ನೋ: ಉತ್ತರ ಪ್ರದೇಶದ ರಾಯಬರೇಲಿಯ ಖಾಸಗಿ ಶಾಲಾ ವಾಹನದಲ್ಲಿ ಅವಿತು ಕುಳಿತಿದ್ದ ದೈತ್ಯ ಹೆಬ್ಬಾವು ಆತಂಕ ಸೃಷ್ಟಿಸಿತ್ತು. ಈ ಹೆಬ್ಬಾವನ್ನು ರಕ್ಷಿಸಿ ತೆರವುಗೊಳಿಸಿದ ಕಾರ್ಯಾಚರಣೆ ರೋಮಾಂಚಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ರಾಯಬರೇಲಿಯ ಖಾಸಗಿ ಶಾಲೆಯ ವಾಹನವನ್ನು ಚಾಲಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ. ಆ ಪ್ರದೇಶದಲ್ಲಿ ಆಡುಗಳು ಜಮಾಯಿಸುತ್ತಿದ್ದವು. ಆ ಆಡುಗಳನ್ನು ಹಿಡಿದು ತಿನ್ನಲು ಹೆಬ್ಬಾವು ಬಂದಿರಬಹುದು ಎನ್ನಲಾಗುತ್ತಿದೆ. ಈ ವಾಹನದಲ್ಲಿದ್ದ ಹೆಬ್ಬಾವು ಅದಾಗಲೇ ಏನನ್ನೋ ತಿಂದಂತಿತ್ತು. ಈ ದೈತ್ಯ ಹೆಬ್ಬಾವನ್ನು ಹಿಡಿಯಲು ಕಾರ್ಯಾಚರಣೆ ತಂಡ ಹರಸಾಹಸಪಡಬೇಕಾಯಿತು.
ಈ ಕಾರ್ಯಚರಣೆಯ ವೀಡಿಯೋವನ್ನು ಸೆರೆಹಿಡಿದ ವ್ಯಕ್ತಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ.
उत्तर प्रदेश के #रायबरेली में #स्कूल की एक बस के इंजन में #अजगर फंसा था।
कड़ी मशक़्क़त के बाद #वन विभाग की टीम ने निकाला बाहर।#UttarPradesh #Raebareli #snake #snakes #BOA2022 #India pic.twitter.com/nuKslyOXT4
— Gurmeet Singh 🇮🇳 (@Gurmeet_Singhhh) October 16, 2022























































