ದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪಂಜಾಬ್ ಅಖಾಡದಲ್ಲಿ ಆಮ್ ಆದ್ಮಿ ಪಾರುಪತ್ಯ ಮೆರೆದಿದೆ. ಈ ಮಿನಿಮಹಾ ಸಮರದ ಪೈಕಿ ಪಂಜಾಬ್ ಚುನಾವಣೆ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವೆನಿಸಿತ್ತು. ಆದರೆ ಈ ರಾಜ್ಯ ಇದೀಗ ಪಂಜಾಬ್ ‘ಆಪ್’ ವಶವಾಗಿದೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್‌ನಲ್ಲಿ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಹರಸಾಹಸ ನಡೆಸಿತ್ತು. ಆದರೆ ನಾಯಕರ ಒಳಜಗಳದಿಂದಾಗಿ ಕಾಂಗ್ರೆಸ್‌ನ ಕನಸು ಭಗ್ನವಾಗಿದೆ ಎಂದು ವಿಶ್ಲೇಷಣೆ ನಡೆದಿದೆ.
ಪಂಜಾಬ್: ಬಲಾಬಲ ಹೀಗಿದೆ.
- ಒಟ್ಟು ಸ್ಥಾನಗಳು : 117
- ಮ್ಯಾಜಿಕ್ ಸಂಖ್ಯೆ: 59
- AAP : 92
- CONG: 18
- SAD: 4
- BJP: 2
- OTHERS: 1