ಮುಂಬೈ: ಪುಣೆ ಸಮೀಪದ ಲೋನಾವಾಲಾ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಭವಿಸಿದೆ.
ಪುಣೆ ಸಮೀಪದ ಸೈಯದ್ ನಗರ ಮೂಲದ ಕುಟುಂಬವೊಂದು ವಾರಾಂತ್ಯದ ರಜಾ ದಿನದಂಡು ಭೂಶಿ ಅಣೆಕಟ್ಟಿನ ಹಿನ್ನೀರಿನ ಲೋನಾವಾಲಾ ಜಲಪಾತ ಬಳಿ ತೆರಳಿದ್ದರು. ನದಿಯ ಮಧ್ಯೆ ಈ ಕುಟುಂಬ ನಿಂತಿದ್ದಾಗ ದಿಢೀರನೆ ಪ್ರವಾಹ ಉಂಟಾಗಿದೆ. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನದಿ ಮಧ್ಯದಲ್ಲಿದ್ದವರು ದಡಕ್ಕೆ ಮರಳಲು ಸಾಧ್ಯವಾಗಿಲ್ಲ. ನೋಡ ನೋಡುತ್ತಿದ್ದಂತೆಯೇ ಏಳು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಇಬ್ಬರು ಈಜಿ ದಡ ಸೇರಿ ಪಾರಾಗಿದ್ದಾರೆ. ಈ ದುರ್ಘಟನೆಯ ವೀಡಿಯೋ ವೈರಲ್ ಆಗಿದೆ.
#Pune: Family outing of Ansari Family turned tragic when 5 of the family members including children drowned in #BhushiDam on Sunday in Pune’s #Lonavala.
Ten people of the family were swept away in the flooding water while others managed to escape and one girl was rescued other… pic.twitter.com/OvgpNiQx5T
— Saba Khan (@ItsKhan_Saba) June 30, 2024