ಪ್ರಿ ವೆಡ್ಡಿಂಗ್ ಫೊಟೋ ಶೂಟ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಈ ಫೋಟೋ ಸೆಷನ್ಸ್ ನಾನಾ ರೀತಿಯಲ್ಲಿ ನಡೆಯುತ್ತದೆ. ಕೆಲವು ದಿನಗಳ ಹಿಂದೆ ಪಂಜಾಬ್ ಮೂಲದ ವಧುವಿನ ಪ್ರಿ-ವೆಡ್ಡಿಂಗ್ ಫೊಟೋ ಶೂಟ್ ಸಂದರ್ಭದಲ್ಲಿ ಅವಘಡವೊಂದು ಜನರನ್ನು ಬೆಚ್ಚಿ ಬೀಳಿಸಿದೆ.
ವಧುವನ್ನು ಉಯ್ಯಾಲೆಯಲ್ಲಿ ತೂಗುವ ರೀತಿಯ ಫೊಟೋ ತೆಗೆಯುವ ಪ್ರಯತ್ನ ನಡೆದಿತ್ತು. ಆದರೆ ವಧುವಿನ ತೂಕ ಹೆಚ್ಚಿದ್ದರಿಂದ ಉಯ್ಯಾಲೆ ಮುರಿದು ಬಿದ್ದಿದೆ. ಉಯ್ಯಾಲೆಯಲ್ಲಿ ತೂಗುತ್ತಿದ್ದ ಯುವತಿ ನೀರಿಗೆ ಬಿದ್ದು ಅವಾಂತರವೇ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಆಕೆ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
View this post on Instagram