ಬೆಂಗಳೂರು: ಇದು ಅಚ್ಚರಿ ಅನ್ನಿಸಿದರೂ ನಿಜ. ಕೆಲವೊಮ್ಮೆ ಮಾನವೀಯತೆ ಮೆರೆಯುವ ಸಂದರ್ಭದಲ್ಲಿ ತಕ್ಷಣದ ನಿರ್ಧಾರ ಕೈಗೊಳ್ಳಲೇಬೇಕು. ಇಲ್ಲೊಬ್ಬ ಪೊಲೀಸ್ ಅಧಿಕಾರಿ ಕರ್ತವ್ಯದಲ್ಲಿದ್ದಾಗ ಕೈಗೊಂಡ ನಿರ್ಧಾರ ಸಾರ್ವಜನಿಕರ ಪ್ರಸಂಶೆಗೆ ಕಾರಣವಾಗಿದೆ. ಈ ಪೊಲೀಸ್ ಅಧಿಕಾರಿ ‘ನಿಜಕ್ಕೂ ಆಪತ್ಭಾಂಧವ’ ಎಂದು ಸಾರ್ವಜನಿಕರು ಗುಣಗಾನ ಮಾಡಿದ್ದಾರೆ.
ಇವರು ಬೆಂಗಳೂರಿನ ಸಹಾಯಕ ಪೊಲೀಸ್ ಕಮಿಷನರ್ ರಾಮಚಂದ್ರಪ್ಪ. ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ನಡೆದ ಆಕಸ್ಮಿಕ ಘಟನೆಯ ವೇಳೆ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿ ಎಲ್ಲರ ಗಮನ ಕೇಂದ್ರೀಕರಿಸಿದ್ದಾರೆ.
Thank you for the care and compassion # LifeSaverCop @DgpKarnataka @CPBlr @alokkumar6994 @masaleemips @BlrCityPolice @blrcitytraffic @mybmtc@BMTC_BENGALURU
#BMTC
Small act of kindness, duty, compassion & respect for life is thy name of #NammaBengaluruPolice 👏
Contd 01 pic.twitter.com/LI0isc1NoX— Shubha Lakshmi (@Shubha_Lakshmi_) July 17, 2023
ಏನಿದು ಸನ್ನಿವೇಶ?
ಶಿವಾಜಿನಗರ-ಕಾಡುಗೋಡಿ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕನ ಆರೋಗ್ಯ ಹಠಾತ್ತನೆ ಏರುಪೇರಾಗಿ ಬಸ್ ಮಾರ್ಗ ಮಧ್ಯೆ, ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ನಿಂತಿತ್ತು. ಅಲ್ಲೇ ಸಮೀಪ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಎಸಿಪಿ ರಾಮಚಂದ್ರಪ್ಪ ಅವರು ಇದನ್ನು ಗಮನಿಸಿ ಸ್ಥಳಕ್ಕೆ ತೆರಳಿದ್ದಾರೆ. ಚಾಲಕ ಅಸ್ವಸ್ಥಗೊಂಡು ಬಸ್ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದುದನ್ನು ಗಮನಿಸಿದ ಎಸಿಪಿ, ತಾವು ಬಸ್ ಏರಿ ತಾವೇ ಬಸ್ ಚಲಾಯಿಸಿ ಚಾಲಕನನ್ನು ಆಸ್ಪತ್ರಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಎಸಿಪಿ ರಾಮಚಂದ್ರಪ್ಪ ಅವರು ಸುಮಾರು 1 ಕಿ.ಮೀ. ದೂರ ಬಸ್ ಚಲಾಯಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆ ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಈ ಸನ್ನಿವೇಶವನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.