ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ರಂಗೇರಿದೆ. ಈ ಬಾರಿಯ ಚುನಾವಣೆಯನ್ನು ಪ್ರತಿಷ್ಠೆಯಗಿ ಪರಿಗಣಿಸಿರುವ ಬಿಜೆಪಿ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ.
2021ರ ಎಪ್ರಿಲ್ 6 ರಂದು ತಮಿಳುನಾಡಿನ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾದ ಅಖಾಡಕ್ಕೆ ಧುಮುಕಿದ್ದಾರೆ. ತಿರುಪ್ಪೂರು ಜಿಲ್ಲೆಯ ಧಾರಪುರಂ ಕ್ಷೇತ್ರದಲ್ಲಿ ಮಂಗಳವಾರ ಅವರು ಕೈಗೊಂಡ ಪ್ರಚಾರಸಭೆ ಗಮಬಸೆಳೆಯಿತು.
ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿರುವ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ತಮಿಳುನಾಡು ಭಾಜಪ ಅಧ್ಯಕ್ಷರೂ ಆದ ಧಾರಾಪುರಂ ಕ್ಷೇತ್ರದ ಅಭ್ಯರ್ಥಿ ಡಾ.ಎಲ್. ಮುರುಗನ್, ತಮಿಳುನಾಡಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವನ್ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಮಾವೇಶದಲ್ಲಿ ಪ್ರಧಾನಿಯವರಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಆಯುಧವಾದ ವೇಲಾಯುಧನ್‌ನ್ನು ನೀಡಿ ಗೌರವಿಸಿದ ಸನ್ನಿವೇಶ ಗಮನಸೆಳೆಯಿತು.