ನವದೆಹಲಿ: ಎರಡು ದಿನಗಳ ಅಸ್ಸಾಂ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಮತ್ತು ಜೀಪ್ ಸಫಾರಿ ಮೂಲಕ ಸ್ಮರಣೀಯ ಅನುಭವವನ್ನು ಪಡೆದರು.
ಕೊಹೊರಾದಲ್ಲಿರುವ ಉದ್ಯಾನವನದ ಕೇಂದ್ರ ಶ್ರೇಣಿಯಲ್ಲಿ ತಮ್ಮ ಸಫಾರಿ ಪ್ರಾರಂಭಿಸಿದ ಪ್ರಧಾನಿ ಮೋದಿ, ಸುಂದರವಾದ ಮಿಹಿಮುಖ್ ಪ್ರದೇಶದಲ್ಲಿ ಆನೆ ಸಫಾರಿಯೊಂದಿಗೆ ಗಮನಸೆಳೆದರು. ರೋಮಾಂಚಕ ಜೀಪ್ ಸಫಾರಿ ಮೂಲಕ ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಕ್ಕೆಕುತೂಹಲದ ಕೇಂದ್ರಬಿಂದುವಾದರು.
ತಮ್ಮ ಈ ಸಫಾರಿ ಅನುಭವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಮೋದಿ, ತಾವು ಕ್ಲಿಕ್ಕಿಸಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
আজি পুৱা মই অসমৰ কাজিৰঙা ৰাষ্ট্ৰীয় উদ্যানত আছিলো। প্ৰচুৰ সেউজীয়াৰে পৰিবেষ্টিত এই ইউনেস্কো বিশ্ব ঐতিহ্য ক্ষেত্ৰখন বিশ্বপ্ৰসিদ্ধ এশিঙীয়া গঁড়কে ধৰি বৈচিত্ৰময় উদ্ভিদ আৰু প্ৰাণীজগতেৰে ধন্য। pic.twitter.com/yspWhLnPtd
— Narendra Modi (@narendramodi) March 9, 2024