ದೆಹಲಿ: ಮಹತ್ವದ ನಿರ್ಧಾರವೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಪಾಪ್ಯುಲರ್ ಫ್ರಂಟ್ ಮಾತ್ರವಲ್ಲ ಅದರ ಸಹವರ್ತಿ ಸಂಘಟನೆಗಳನ್ನೂ ನಿರ್ಬಂಧಿಸಲಾಗಿದೆ.
ಕೆಲವು ದಿನಗಳಿಂದ ಭಾರೀ ಸುದ್ದಿಗೆ ಗ್ರಾಸವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರ ಮನೆಗಳಿಗೆ ಎನ್‌ಐಎ, ಪೊಲೀಸ್ ತಂಡಗಳು ದಾಳಿ ಮಾಡಿ ಅನೇಕರನ್ನು ಬಂಧಿಸಿತ್ತು. ಹಲವು ಕೊಲೆ, ಹಾಗೂ ಇನ್ನಿತರ ಕೃತ್ಯಗಳಲ್ಲಿ ಈ ಸಂಘಟನೆಯ ಕಾರ್ಯಕರ್ತರ ಹೆಸರು ಥಳುಕು ಹಾಕಿದ್ದು, ಗಣ್ಯರ ಹತ್ಯೆ ಸಂಚು ಸಹಿತ ಹಲವು ಪ್ರಕರಣಗಳಲ್ಲೂ ಪಿಎಫ್‌ಐ ಮತ್ತು ಅದರ ಸಹ ಸಂಘಟನೆಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು.
In a huge step against home grown Terrorism, the Union Home Ministry has banned the Popular Front of India (PFI) and its affiliates for 5 years.
Congratulations to Union Home Minister Shri @AmitShah for taking this decisive action against the #PFI that was nurtured by CONgress. pic.twitter.com/Lw69lQPESy
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) September 28, 2022
ಈ ನಡುವೆ, ಪಿಎಫ್ಐ ಹಾಗೂ ಅದರ ಸಹ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಒತ್ತಾಯ ಬಲಗೊಂಡಿದ್ದು, ಈ ಆರೋಪ, ಆಗ್ರಹಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ದೇಶವಿದ್ರೋಹಿ ಕೃತ್ಯಗಳಲ್ಲಿ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಪಿಎಫ್ಐ ಹಾಗೂ ಅದರ ಬೆಂಬಲಿತ ಕೆಲವು ಸಂಘಟನೆಗಳನ್ನು ಸರ್ಕಾರ ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ.