ಪ್ರತೀ ಲೀಟರ್‌ಗೆ 100 ರೂಪಾಯಿ ಗಡಿ ದಾಟಿದ ಪೆಟ್ರೋಲ್ ದರ; ಗ್ರಾಹಕರ ಜೇಬಿಗೆ ನಿರಂತರ ಕತ್ತರಿ.. ಈ ತಿಂಗಳಲ್ಲೇ 14 ಬಾರಿ ಹೆಚ್ಚಳ.
ದೆಹಲಿ: ದೇಶದಲ್ಲಿ ಪೆಟ್ರೋಲ್ ದರ ಹೆಚ್ಚುತ್ತಲೇ ಸಾಗಿ ಇದೀಗ ದಾಖಲೆ ಮಟ್ಟ ತಲುಪಿದೆ. ಇದೀಗ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದ್ದು ಗ್ರಾಹಕರ ಜೇಬಿಗೆ ನಿರಂತರ ಕತ್ತರಿ ಬೀಳುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಖವಣಿಗೆಯನ್ನಾಧರಿಸಿ ದೇಶದಲ್ಲಿ ತೈಲ ಸಂಸ್ಥೆಗಳು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುತ್ತಿವೆ. ವಿಪರ್ಯಾಸದ ಸಂಗತಿಯೆಂದರೆ ಈ ಫೆಬ್ರವರಿ ತಿಂಗಳಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 14 ಬಾರಿ ಹೆಚ್ಚಾಗಿದೆ.
ಈ ಬೆಳವಣಿಗೆ ಬಗ್ಗೆ ಕೆಲವು ದಿನಗಳಿಂದ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡಡಸುತ್ತಿದೆ. ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಕೈ ನಾಯಕರು ಆರೋಪಿಸಿದ್ದಾರೆ.