ಬೆಂಗಳೂರು: ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳನ್ನುವ ರದ್ದುಪಡಿಸುವ ತೀರ್ಮಾನಕ್ಕೆ ಮುಂದಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪೇಜಾವರ ಶ್ತೀ, ರಾಜ್ಯ ಸರ್ಕಾರ ಯೋಚಿಸಿ ನಡೆಯಬೇಕಿದೆ ಎಂದಿದ್ದಾರೆ.
ನಾಡಿನ ಒಲಿತಿಗಾಗಿ ಹಿಂದಿನ ಸರ್ಕಾರವು ಮತಾಂತರ ನಿಷೇಧ ಹಾಗೂ ಗೋಹತ್ಯಾನಿಷೇಧ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಕುಟುಂಬಗಳು ಛಿದ್ರವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಬಡ ಕುಟುಂಬಗಳು ಹಸುಗಳನ್ನು ಸಾಕಿ ಬದುಕು ಸಾಗಿಸುತ್ತಿವೆ. ಅಂತಹಾ ಗೋವುಗಳನ್ನು ಕಿಡಿಗೇಡಿಗಳು ಕದ್ದು ಸಾಗಿಸುವ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ಹಿಂದಿನ ಸರ್ಕಾರ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇಂತಹಾ ಕಾಯ್ದೆಗಳನ್ನು ರದ್ದುಪಡಿಸುವ ನಿರ್ಧಾರವು ಕಳವಳಕಾರಿ ಸಂಗತಿ ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಈ ವಿಚಾರದಲ್ಲಿ ಸರ್ಕಾರಕ್ಕೆ ಕಿವಿಮಾತು ಹೇಳಿರುವ ಪೇಜಾವರ ಶ್ರೀ, ಕಾಯ್ದೆ ವಾಪಸಾತಿಯ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ನಿಮ್ಮದೇ ಸರ್ಕಾರವಿದೆ, ಜನಪ್ರತಿನಿಧಿಗಳೂ ನಿಮ್ನವರೇ ಆಗಿದ್ದಾರೆ. ಆ ಜನಪ್ರತಿನಿಧಿಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ನಂತರ ಸೂಕ್ತ ನಿರ್ಧಾರಕ್ಕೆ ಬನ್ನಿ ಎಂದು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇದ ಕಾನೂನನ್ನು ವಾಪಾಸ್ ಪಡೆಯುವ ದುಸ್ಸಾಹಸ ಕೈ ಬಿಡಿ – ಕಾಂಗ್ರೆಸ್ ಸರಕಾರಕ್ಕೆ ಪೂಜ್ಯ ಉಡುಪಿ ಪೇಜಾವರ ಶ್ರೀಗಳ ಸಲಹೆ.@BajrangDalOrg @VHPDigital pic.twitter.com/j7RO7lCa3z
— VHP Karnataka (@karvhp) June 19, 2023