ಬೆಳಗಾವಿ: ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಬೆಳಗಾವಿಯಲ್ಲಿ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿರುವುದನ್ನು ಪ್ರತಿಪಕ್ಷ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಲಜ್ಜೆಗೇಡಿ ಸರ್ಕಾರವು ಸ್ವತಃ ADGP ಯನ್ನು ಬಿಟ್ಟು ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದು ನಿಜಕ್ಕೂ ಹೇಯ ಹಾಗೂ ಖಂಡನೀಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹಿಸಿ, ಬೆಳಗಾವಿಯ ಸುವರ್ಣ ಸೌಧದ ಎದುರು ಇಂದು ಬೃಹತ್ ಸಮಾವೇಶ ನಡೆಯಿತು. ಪೊಲೀಸರ ಲಾಠಿ ಏಟಿಗೂ ಬೆದರದ ಹೋರಾಟಗಾರರು ನಮ್ಮ ಸಮಾಜದ ನ್ಯಾಯಯುತವಾದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಲಜ್ಜೆಗೇಡಿ ಸರ್ಕಾರವು ಸ್ವತಃ ADGP ಯನ್ನು ಬಿಟ್ಟು ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದು ನಿಜಕ್ಕೂ… pic.twitter.com/zIrOh3GqNn
— Basanagouda R Patil (Yatnal) (@BasanagoudaBJP) December 10, 2024
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹಿಸಿ, ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್ ಸಮಾವೇಶ ನಡೆಯಿತು. ಪೊಲೀಸರ ಲಾಠಿ ಏಟಿಗೂ ಬೆದರದ ಹೋರಾಟಗಾರರು ನಮ್ಮ ಸಮಾಜದ ನ್ಯಾಯಯುತವಾದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಲಜ್ಜೆಗೇಡಿ ಸರ್ಕಾರವು ಸ್ವತಃ ADGP ಯನ್ನು ಬಿಟ್ಟು ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದು ನಿಜಕ್ಕೂ ಹೇಯ ಹಾಗೂ ಖಂಡನೀಯ. ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಖುದ್ದು ADGP ಶ್ರೇಣಿಯ ಅಧಿಕಾರಿಯನ್ನು ಸರ್ಕಾರ ನಿಯೋಜಿಸಿರುವುದು ಏಕೆ ಎಂದು ಹೇಳಬೇಕು ? ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ತಾರ್ಕಿಕ ಅಂತ್ಯ ಕಾಣುವವರೆಗೂ ಕೂಡಲಸಂಗಮ ಪೀಠದ ಜಗದ್ಗುರು ಪೂಜ್ಯ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಈ ಹೋರಾಟ ಮುಂದುವರೆಯಲಿದೆ ಎಂದವರು ತಿಳಿಸಿದ್ದಾರೆ.