ಬೆಂಗಳೂರು: ವಿಧಾಸಭೆಯ ಕಲಾಪಗಳಲ್ಲಿ ಹನಿಟ್ರ್ಯಾಪ್ ಸಡ್ಡು ಪ್ರತಿಧ್ವನಿಸಿದ್ದು, ಗದ್ದಲ ಕೋಲಾಹಲ ಎಬ್ಬಿಸಿದ ಆರೋಪದಲ್ಲಿ ಬಿಜೆಪಿಯ 18 ಶಾಸಕರನ್ನು ವಿಧಾನಸಭಾಧ್ಯಕ್ಷರು ಅಮಾನತು ಮಾಡಿದ್ದಾರೆ. ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಆರೋಪ ಅಸಂಬಂಧ ಈ ಬಿಜೆಪಿ ಶಾಸಕರನ್ನು 6 ತಿಂಗಳವರೆಗೂ ಕಲಾಪದಿಂದ ಸ್ಪೀಕರ್ ಯುಟಿ ಖಾದರ್ ಅಮಾನತು ಮಾಡಿದ್ದಾರೆ.
ಶುಕ್ರವಾರದ ವಿಧಾನಸಭಾ ಕಲಾಪದಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಮಸೂದೆಗಳನ್ನು ಮತಕ್ಕೆ ಹಾಕುವ ಸಂದರ್ಭದಲ್ಲಿ ಪ್ರತಿಪಕ್ಷಗಳು ‘ಹನಿಟ್ರ್ಯಾಪ್ ಸರ್ಕಾರ’ ಎಂದು ಘೋಷಣೆ ಕೂಗಿ ಪ್ರತಿಭಟಿಸಿದವು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ಡಾ. ಅಶ್ವತ್ಥ್ ನಾರಾಯಣ, ಎಸ್ಆರ್ ವಿಶ್ವನಾಥ್, ಮುನಿರತ್ನ, ಧೀರಜ್ ಮುನಿರತ್ನ, ಭೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಬಿಪಿ ಹರೀಶ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಯಶಪಾಲ್ ಸುವರ್ಣ, ಚಂದ್ರು ಲಮಾಣಿ, ರಾಮಮೂರ್ತಿ, ದೊಡ್ಡನಗೌಡ ಪಾಟೀಲ್, ಬಿ. ಸುರೇಶ್ ಗೌಡ, ಶರಣು ಸಲಗರ, ಚನ್ನಬಸಪ್ಪ, ಬಸವರಾಜ ಮತ್ತಿಮೂಡ ಅವರನ್ನು ಮಾರ್ಷಲ್ ಗಳು ಕಲಾಪದಿಂದ ಹೊರಗೆ ಕಳುಹಿಸಲಾಯಿತು.