ನವದೆಹಲಿ: ನೂತನ ಆರ್ಥಿಕ ವರ್ಷ ಆರಂಭವಾಗಿದ್ದು ಇದೀಗ ಹೊಸ ತೆರಿಗೆ ನೀತಿಯೂ ಜಾರಿಗೆ ಬಂದಿದೆ. ಹೊಸ ತೆರಿಗೆ ಪದ್ದತಿಯಂತೆ ಸ್ಲ್ಯಾಬ್ ಕೂಡಾ ಬದಲಾಗಿದೆ.
ನೂತನ ತೆರಿಗೆ ಪದ್ಧತಿ ಅನ್ವಯ ವಾರ್ಷಿಕ 3 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
-
3 ಲಕ್ಷದಿಂದ ರಿಂದ 6 ಲಕ್ಷ ರೂ ವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ,
-
6 ಲಕ್ಷದಿಂದ 9 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಶೇ.10 ತೆರಿಗೆ
-
9 ಲಕ್ಷದಿಂದ 12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಶೇ.15 ತೆರಿಗೆ
-
12 ಲಕ್ಷದಿಂದ 15 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಶೇ.20 ತೆರಿಗೆ
-
15 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಶೇ.30 ತೆರಿಗೆ.
ಇದೇ ವೇಳೆ, ಹೊಸ ತೆರಿಗೆ ಪದ್ದತಿಯಲ್ಲಿ ಮೂಲ ವಿನಾಯಿತಿ ಮಿತಿಯನ್ನು 3 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಸರ್ಚಾರ್ಜ್ ದರ ಶೇಕಡಾ 37ರಿಂದ ಶೇಕಡಾ 25ಕ್ಕೆ ಇಳಿಸಲಾಗಿದೆ. ಜೊತೆಗೆ ರಿಯಾಯಿತಿ ಮಿತಿ ಕೂಡಾ ಪರಿಷ್ಕೃತವಾಗಿದೆ.