2022 ರಲ್ಲಿ ತೆರೆಕಂಡು 50 ದಿನಗಳ ಯಶಸ್ಸು ಪ್ರದರ್ಶನ ನೀಡಿದ ಭೋಜರಾಜ್ MBBS ಚಿತ್ರದ ನಂತರ ಇದೀಗ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮತ್ತು ಭೋಜರಾಜ್ ವಾಮಂಜೂರು ಮತ್ತೊಂದು ಚಿತ್ರದ ತಯಾರಿಯಲ್ಲಿದ್ದಾರೆ.
‘ಯಾನ್ ಚಾರ್ಲಿಚಾಪ್ಲಿನ್ (‘Yan Charlie Chaplin’) ‘ ಹೆಸರಿನ ಹೊಸ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ನಡೆದಿದ್ದು ಶೀಘ್ರದಲ್ಲೇ ಸೆಟ್ಟೇರಲಿದೆ. ಈ ತುಳು ಚಿತ್ರದಲ್ಲಿ ಬಹತೇಕ ‘ಭೋಜರಾಜ್ mbbs’ನ ಹಾಸ್ಯ ಕಲಾವಿದರ ದಂಡೇ ಇರಲಿದ್ದು ಈ ಬಾರಿ ಮೂಡುಶೆಡ್ಡೆ ವಾಮಂಜೂರು ಸೇರಿ ಒಂದು ವಿಭಿನ್ನ ಶೈಲಿಯ ಚಿತ್ರದ ತಯಾರಿಗೆ ಇಳಿದಿದ್ದಾರೆ.
‘… mbbs’ನಲ್ಲಿ ತಮ್ಮ ವಿಭಿನ್ನ ಹಾಸ್ಯದ ಚಾರ್ಮ್’ನಲ್ಲಿ ರಂಜಿಸಿದ ಭೋಜರಾಜ್ ವಾಮಂಜೂರು ಈ ಬಾರಿ ವಿಭಿನ್ನ ಗೆಟಪ್ ನಲ್ಲಿ ತುಳುವರನ್ನು ರಂಜಿಸಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ. ಈಗಾಗಲೇ ‘ಕುಡ್ಲ ಎಕ್ಸ್ ಪ್ರೆಸ್’ ಎಂಬ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದ್ದ ಮೂಡುಶೆಡ್ಡೆ ಕೆಲವೊಂದು ಕಾರಣ ಕ್ಕೆ ಆ ಚಿತ್ರವನ್ನು ಮುಂದಿನ ವರ್ಷ ಫೆಬ್ರವರಿಯಲ್ಲಿ ಚಿತ್ರೀಕರಿಸುವ ಪ್ಲಾನ್ ಹಾಕಿದ್ದಾರಂತೆ. ಈ ಗ್ಯಾಪ್’ನಲ್ಲಿ ವಾಮಂಜೂರು ಮುಖ್ಯ ಪಾತ್ರದಲ್ಲಿರುವ ‘ಯಾನ್ ಚಾರ್ಲಿಚಾಪ್ಲಿನ್’ ತುಳು ಚಿತ್ರಕೆ ಆಕ್ಷನ್ ಕಟ್ ಹೇಳಲು ತಯಾರಾಗಿದ್ದಾರೆ, ಚಿತ್ರದ ತಾರಾಗಣ ದ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡಲಿದ್ದಾರಂತೆ ಮೂಡುಶೆಡ್ಡೆ.
ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ
ಕನ್ನಡದಲ್ಲಿ ‘ಬಣ್ಣ ಬಣ್ಣದ ಬದುಕು’, ತುಳುವಿನಲ್ಲಿ ‘ಪಮ್ಮಣ್ಣ ದಿ ಗ್ರೇಟ್’, ‘ಭೋಜರಾಜ್ mbbs’ ಸಹಿತ ವಿಭಿನ್ನ ಕಥಾ ಹಂದರದ ಚಿತ್ರಗಳನ್ನೂ ರಚಿಸಿ ನಿರ್ದೇಶಿಸಿಸುವಲ್ಲಿ ಸೈ ಎನಿಸಿರುವ ಮೂಡುಶೆಡ್ಡೆ ತಮ್ಮ ಮುಂದಿನ ತುಳು ಚಿತ್ರ ಕೂಡ ಡಿಫರೆಂಟ್ ಕಾಮಿಡಿ ಸಿನಿಮಾ ಎಂಬ ಸುಳಿವನ್ನು ನೀಡಿದ್ದಾರೆ.