ಪಾಟ್ನಾ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಮತ್ತೊಮ್ಮೆ ಮನ್ನಣೆ ಸಿಕ್ಕಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಜಯಭೇರಿ ಭಾರಿಸಿದೆ. ನಿರೀಕ್ಷೆಗೂ ಮೀರಿದ ಯಶಸ್ಸು NDA ಗೆ ಸಿಕ್ಕಿದ್ದು, ಬಿಹಾರದಲ್ಲಿ ವಿಜಯೋತ್ಸವ ಸಂಭ್ರಮ ಮನೆಮಾಡಿದೆ.
ಈ ಬಾರಿಯಾದರೂ ಬಿಹಾರದಲ್ಲಿ ಗದ್ದುಗೆ ಏರಬೇಕೆಂಬ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಕನಸು ಭಗ್ನವಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳ ಪೈಕಿ NDA (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) 202 ಸ್ಥಾನಗಳಲ್ಲಿ ಜಯಗಳಿಸಿ ಮತ್ತೆ ಅಧಿಕರಕ್ಕೆ ಬಂದಿದೆ. JDU 85 ಸ್ಥಾನಗಳನ್ನು ಗೆದ್ದರೆ, ಮಿತ್ರಪಕ್ಷ ಭಾರತೀಯ ಜನತಾ ಪಕ್ಷ 89 ಸ್ಥಾನಗಳನ್ನು ಗೆದ್ದಿದೆ. ಇತರ ಮಿತ್ರಪಕ್ಷಗಳು 28 ಸ್ಥಾನಗಳನ್ನು ಪಡೆಯುವ ಮೂಲಕ NDA ಒಕ್ಕೂಟವು 202 ಸ್ಥಾನಗಳೊಂದಿಗೆ ಭಾರೀ ಬಹುಮತ ಪಡೆದುಕೊಂಡಿದೆ.
ಎದುರಾಳಿ ಮಹಾಘಟಬಂಧನ್ ಪೈಕಿ RJD 25 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಪಕ್ಷದ ಸಾಧನೆ 6 ಸ್ಥಾನಗಳಿಗೆ ಸೀಮಿತವಾಯಿತು. ಇತರ ಮಿತ್ರಪಕ್ಷಗಳು 4 ಸ್ಥಾನಗಳನ್ನು ಗೆದ್ದಿವೆ. ಮಹಾಘಟಬಂಧನ್ ಒಟ್ಟು 35 ಸ್ಥಾನಗಳನ್ನು ಗೆದ್ದಿದೆ.
ಚುನಾವಣಾ ಆಯೋಗ ಪ್ರಕಟಿಸಿದ ಅಂತಿಮ ಫಲಿತಾಂಶ ಹೀಗಿದೆ.
Party Wise Results (Total 243)
- Bharatiya Janata Party – BJP – 89
- Janata Dal (United) – JD(U) -85
- Rashtriya Janata Dal – RJD – 25
- Lok Janshakti Party (Ram Vilas) – LJPRV – 19
- Indian National Congress – INC – 6
- All India Majlis-E-Ittehadul Muslimeen – AIMIM – 5
- Hindustani Awam Morcha (Secular) – HAMS – 5
- Rashtriya Lok Morcha – RSHTLKM – 4
- Communist Party of India (Marxist-Leninist) (Liberation) – CPI(ML)(L) – 2
- Indian Inclusive Party – IIP – 1
- Communist Party of India (Marxist) – CPI(M) -1
- Bahujan Samaj Party – BSP – 1






















































