ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳು ಶೀಮಂತವಾಗಿವೆ ಮಾರ್ಚ್ 31ರಂದು ಅಂತ್ಯವಾದ ಕಳೆದ ಹಣಕಾಸು ವರ್ಷದಲ್ಲಿ (2023-24ರಲ್ಲಿ) ರಾಜ್ಯದ ಹತ್ತು ಪ್ರತಿಷ್ಠಿತ ದೇವಾಲಯಗಳಿಂದ ಕಾಣಿಕೆ ಹಾಗೂ ಸೇವೆಗಳ ರೂಪದಲ್ಲಿ 412 ಕೋಟಿ ರೂಪಾಯಿ ಆದಾಯ ಬಂದಿದೆ. 2022-23ಕ್ಕೆ ಹೋಲಿಸಿದಾಗ ಈ ವರ್ಷದ ಆದಾಯದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. 2022-23ರಲ್ಲಿ 372 ಕೋಟಿ ರೂಪಾಯಿ ಆದಾಯ ಬಂದಿತ್ತು.
‘ಶಕ್ತಿ’ ಯೋಜನೆ ಜಾರಿಗೆ ಬಂಡ ನಂತರ ಪ್ರವಾಸಿಗರ ಹೆಚ್ಚಾಗಿದ್ದು ದೇವಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ದೇವಾಲಯಗಳ ಹುಂಡಿಗಳಿಗೆ ಕಾಣಿಕೆ ಪ್ರಮಾಣವೂ ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಚಾಮುಡೇಶ್ವರಿ, ಬನಶಂಕರಿ, ಹುಲಿಗೆಮ್ಮ, ನಂಜುಂಡೇಶ್ವರ ಸೇರಿದಂತೆ ಹಲವು ದೇವಾಲಯಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಬಂದಿದೆ.
ರಾಜ್ಯದಲ್ಲಿ ಸುಮಾರು 34,563 ಮುಜರಾಯಿ ದೇವಾಲಯಗಳಿದ್ದು, 2022-23ನೇ ಸಾಲಿನಲ್ಲಿ 709 ಕೋಟಿ ರೂಪಾಯಿ ಆದಾಯ ಗಳಿಸಿದ್ದವು. ಈ ಆದಾಯವು 2023-24ರಲ್ಲಿ ಅಂದಾಜು 1,000 ಕೋಟಿ ರೂಪಾಯಿ ಕ್ರಮಿಸಿದೆ.
ಕುಕ್ಕೆ, ಕೊಲ್ಲೂರು ಶ್ರೀಮಂತ ದೇಗುಲ:
ದಕ್ಷಿಣಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇಗುಲವು ಅತಿ ಹೆಚ್ಚು ಆದಾಯ ತರುವ ದೇವಳವಾಗಿದೆ. ಸರ್ಪ ಸಂಸ್ಕಾರ ಮತ್ತಿತರ ಸೇವೆಗಳನ್ನೂ ನೆರವೇರಿಸಲು ದೇಶ- ವಿದೇಶಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕೆಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿದ್ದು, 2022-23ರಲ್ಲಿ 123.64 ಕೋಟಿ ರೂಪಾಯಿ ಆದಾಯ ಬಂದಿತ್ತು. ಈ ಆದಾಯವು 2023-24ರಲ್ಲಿ 146.01 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.
ಕೊಲ್ಲೂರಿಗೂ ದೇವಾಲಯದಲ್ಲೂ 2022-23ರಲ್ಲಿ 59 ಕೋಟಿ ರೂಪಾಯಿ ಆದಾಯವಿತ್ತು. ಈ ಬಾರಿ 68 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ ಎಂದು ಅಂದಾಜಿಸಲಾಗಿದೆ.
2023-24ರಲ್ಲಿ ಪ್ರಮುಖ ದೇವಾಲಯಗಳ ಆದಾಯ (ಕೋಟಿ ರೂ. ಗಳಲ್ಲಿ)