ಬೆಂಗಳೂರು: ಬೆಂಗಳೂರಿನ ರಾಮಮೂರ್ತಿನಗರದ ದಾಸಪ್ಪ ಲೇಔಟ್’ನ ಬಸಿಲಿಕಾ ಲಿಲಯದಲ್ಲಿ ವಾಸವಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಸಮೀಪದ ಬಳ್ಳುರು ಗ್ರಾಮದ ನಿವಾಸಿ 69 ವರ್ಷದ ಮುರುಗೇಶ್ ಅವರು ನಾಪತ್ತೆಯಾಗಿದ್ದಾರೆ.
ಸುಮಾರು ತಿಂಗಳ ಹಿಂದೆ ತಮ್ಮ ಪುತ್ರ ಪುನೀತ ಕುಮಾರ್ ಮನೆಯಲ್ಲಿ ವಾಸವಿದ್ದರು. ರಾಮಮೂರ್ತಿನಗರದ 3 ನೇ ಮುಖ್ಯ ರಸ್ತೆ, 2ನೇ ಕ್ರಾಸ್’ನಲ್ಲಿರುವ ದಾಸಪ್ಪ ಲೇಔಟ್’ನ ಬಸಿಲಿಕಾ ಲಿಲಯದಲ್ಲಿ ಪುನೀತ ಕುಮಾರ್ ವಾಸವಿದ್ದು ಅವರ ಜೊತೆ ಉಳಿದುಕೊಂಡಿದ್ದರು. 31.12.2024 ರಂದು ಬೆಳಿಗೆ 09-40 ಗಂಟೆ ಸುಮಾರಿಗೆ ಬೀಡಿ ಖರೀದಿಸಲೆಂದು ಮನೆ ಸಮೀಪದ ಅಂಗಡಿಯತ್ತ ತೆರಳಿರುವ ಮುರುಗೇಶ್ ಅವರು ಮತ್ತೆ ಮನೆಗೆ ವಾಪಸ್ಸು ಬಂದಿಲ್ಲ ಎಂದು ಅವರ ಪುತ್ರ ಪುನೀತ ಕುಮಾರ್ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ನಾಪತ್ತೆಯ್ತಾಗಿರುವ ಮುರುಗೇಶ್ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದೇ ವೇಳೆ, ನಾಪತ್ತೆಯಾಗಿರುವ ಮುರುಗೇಶ್ ಅವರು ಕನ್ನಡ ಮತ್ತು ತಮಿಳು ಭಾಷೆ ಬಲ್ಲವರಾಗಿದ್ದು, ಅವರ ಬಗ್ಗೆ ಸುಳಿವು ಸಿಕ್ಕಿದಲ್ಲಿ 9480266440 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಅವರ ಪುತ್ರ ಪುನೀತ ಕುಮಾರ್ ಮನವಿ ಮಾಡಿದ್ದಾರೆ.