ಚಿಕ್ಕಮಗಳೂರು: ಬಿಜೆಪಿಯವರು ಯಾವತ್ತಿದ್ದರೂ ಹಿಂದೂ ಹುಲಿಗಳೇ ಹೊರತು ಮುಲ್ಲಾಗಳಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮುಸ್ಲಿಂ ಹೆಸರಿನಲ್ಲಿ ಬಿಜೆಪಿ ನಾಯಕರ ಫೊಟೋ ಹರಿಯಬಿಟ್ಟಿರುವ ಕಾಂಗ್ರೆಸ್ ನಡೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ‘ನನ್ನನ್ನು ಮುಲ್ಲಾ ಅಂತ ಕರೆಯೋಕ್ಕಾಗಲ್ಲ, ಹಿಂದೂ ಹುಲಿ ಅಂತಾನೇ ಕರೆಯಬೇಕು’ ಎಂದರು. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ನಡೆ ಬಗ್ಗೆ ತಮ್ಮದೇ ರೀತಿ ಪ್ರತಿಕ್ರಿಯಿಸಿದ ಅವರು, ”ನನ್ನನ್ನು ಮುಲ್ಲಾ ಅಂತ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳೊಲ್ಲ’ ಎಂದು ಛೇಡಿಸಿದರು.
ತಾವು ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿರುವುದಕ್ಕೆ ಸ್ಪಷ್ಟನೆ ನೀಡಿದ ಸಿ.ಟಿ.ರವಿ, ಅವರರವರ ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ಬರುತ್ತದೆ. ಅದರಂತೆ, ಶಾದಿ ಭಾಗ್ಯ ಕರುಣಿಸುತ್ತಾ, ಬೆಂಕಿ ಹಾಕಿದ್ದ ಮತಾಂಧರನ್ನೂ ಅಮಾಯಕರೆನ್ನುತ್ತಾ ದೇ ಆರ್ ಆಲ್ ಮೈ ಬ್ರದರ್ಸ್ ಎನ್ನುವವರಿಗೆ ಮುಲ್ಲಾ ಹೆಸರು ಕನೆಕ್ಟ್ ಆಗುತ್ತದೆ ಎಂದು ಬಣ್ಣಿಸಿದರು. ಕೇಸರಿ, ಕುಂಕುಮವನ್ನು ತಿರಸ್ಕರಿಸಿ, ಟೋಪಿಯನ್ನು ಪ್ರೀತಿಯಿಂದ ದರಿಸಿಕೊಳ್ಳುವ ಇವರನ್ನು ಏನೆನ್ನಬೇಕು ಎಂದೂ ಒಗಟಿನ ರೀತಿ ಪ್ರಶ್ನಿಸಿದರು.