ಜಾಗತಿಕ ಸಂಕಟಗಳಿಗೆ ಇತಿಶ್ರೀ ಹಾಡಲು ಒಗ್ಗೂಡಿ ಕೆಲಸ ಮಾಡೋಣ.. ‘ರಿಷಿ’ಗೆ ಸಂದೇಶ ರವಾನಿಸಿದ ‘ರಾಜಋಷಿ’ ಎಂದು ಮೋದಿ ಸಂದೇಶಕ್ಕೆ ನೆಟ್ಟಿಗರ ಪ್ರತಿಕ್ರಿಯೆ.
ದೆಹಲಿ: ಬ್ರಿಟನ್ ಪ್ರಧಾನಿಯಾಗುತ್ತಿರುವ ಭಾರತೀಯ ಮೂಲದ ರಿಷಿ ಸುನಕ್ ಅವರಿಗೆ ಶುಭಾಶಯಗಳ ಮಹಾಮಳೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅಬಿನಂದನೆಗಳ ಹೊಳೆಯೇ ಹರಿದಂತಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡಾ ರಿಷಿ ಸುನಕ್ ಅವರಿಗೆ ಆತ್ಮೀಯ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ. ‘ಪ್ರಧಾನಿಯಾದ ನಿಮ್ಮ ಜತೆ ಜಾಗತಿಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದಿರುವ ನರೇಂದ್ರ ಮೋದಿ, ವಿಶ್ವದ ವಿವಿಧ ಸಂಕಟಗಳಿಗೆ ಇತಿಶ್ರೀ ಹಾಡಲು ಕೆಲಸ ಮಾಡೋಣ ಎಂದಿದ್ದಾರೆ. ಬೆಳಕಿನ ಹಬ್ಬದ ಸಂದರ್ಭದಲ್ಲೇ ಬ್ರಿಟನ್ ದೇಶದ ಪ್ರಧಾನಿಯಾಗುತ್ತಿರುವ ನಿಮಗೆ ಭಾರತೀಯರ ಪರವಾಗಿ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Warmest congratulations @RishiSunak! As you become UK PM, I look forward to working closely together on global issues, and implementing Roadmap 2030. Special Diwali wishes to the 'living bridge' of UK Indians, as we transform our historic ties into a modern partnership.
— Narendra Modi (@narendramodi) October 24, 2022
ನರೇಂದ್ರ ಮೋದಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಷಿಗೆ ರಾಜಋಷಿ ಉತ್ತಮ ಸಂದೇಶ ರವಾನಿಸಿದ್ದಾರೆಂಬ ಪ್ರತಿಕ್ರಿಯೆ ಗಮನಸೆಳೆದಿದೆ.
















































