ಐಲಾಟ್: ಇಸ್ರೇಲ್ನ ಐಲಾಟ್ನಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತದ ಚೆಲುವೆ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಮಿಸ್ ಯುನಿವರ್ಸ್ ಕಿರೀಟ ತೊಟ್ಟ ಮೂರನೇ ಭಾರತದ ಬೆಡಗಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಐಲಾಟ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಭಾರತದ ಹರ್ನಾಜ್ ಸಂಧು ಅವರನ್ನು ಭುವನ ಸುಂದರಿಯಾಗಿ ಘೋಷಿಸಲಾಯಿತು. 2020ರ ವಿಶ್ವ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಸಮಾರಂಭದಲ್ಲಿ ಹರ್ನಾಜ್ ಸಂಧುಗೆ ಕಿರೀಟವನ್ನು ತೊಡಿಸಿದರು. 21ವರ್ಷಗಳ ಬಳಿಕ ಭಾರತಕ್ಕೆ ಮತ್ತೊಮ್ಮೆ ಭುವನ ಸುಂದರಿ ಪ್ರಶಸ್ತಿ ಸಿಕ್ಕಿದೆ.
https://mobile.twitter.com/MissUniverse/status/1470227063789563907?ref_src=twsrc%5Etfw%7Ctwcamp%5Etweetembed%7Ctwterm%5E1470227063789563907%7Ctwgr%5E%7Ctwcon%5Es1_&ref_url=https%3A%2F%2Fd-3288363265842008071.ampproject.net%2F2111242025001%2Fframe.html