ದೆಹಲಿ: ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ಶೋಭಾ ಕರಂದ್ಲಾಜೆಯವರು ಇಂದು ದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ನರೇಂದ್ರ ಸಿಂಗ್ ತೋಮರ್, ಶ್ರೀ ಕೈಲಾಶ್ ಚೌಧರಿ ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸಹೋದ್ಯೋಗಿಗಳು, ಪಕ್ಷದ ಮುಖಂಡು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡ ಶೋಭಾ ಕರಂದ್ಲಾಜೆ, ಕೇಂದ್ರ ಸರ್ಕಾರ ಈ ವರೆಗೂ ರೈತರ ಹಿತ ಕಾಪಾಡುತ್ತಾ ಬಂದಿದೆ. ಇದಕ್ಕೆ ಪೂರಕವಾಗಿಯೇ ನೂತನ ಕೃಷಿ ಕಾಯ್ದೆಯನ್ನು ದೇಶದ ಮುಂದಿಟ್ಟಿದೆ. ಇದರಿಂದ ದೇಶದ ರೈತರಿಗೆ ಅನುಕೂಲವಾಗಲಿದೆ ಎಂದರು. ತಾವು ಕೃಷಿ ಇಲಾಖಯ ಸಚಿವೆಯಾಗಿ ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿದರು.
ಪ್ತಧಾನಿ ಮೋದಿ, ಪಕ್ಷದ ವರಿಷ್ಠರು, ಹಿರಿಯರು ತಮ್ಮ ಮೇಲೆ ಭರವಸೆ ಇಟ್ಟು ಸಚಿವ ಸ್ಥಾನ ವಹಿಸಿಕೊಟ್ಟಿದ್ದು ಅವರ ಆಶಯಕ್ಕೆ ತಕ್ಕಂತೆ ಕರ್ತವ್ಯ ನಿಭಾಯಿಸುವುದಾಗಿ ಹೇಳಿದ ಶೋಭಾ ಕರಂದ್ಲಾಜೆ ಅವರು, ತಾಮ್ಮ ಪದಗ್ರಹಣ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನರ ಸಹಕಾರವನ್ನು ನೆನಪಿಸಿಕೊಂಡರು. ಕರುನಾಡಿನ ಜನರು ತಮ್ಮನ್ನು ಆರಿಸಿ ಕಳುಹಿಸಿದ್ದರಿಂದ ಈ ಉನ್ನತ ಜವಾಬ್ಧಾರಿ ವಹಿಸುವ ಅವಕಾಶ ಸಿಕ್ಕಿದ್ದು ಜನಹಿತ ನಡೆ ಅನುಸರಿಸುವುದಾಗಿ ಆಶ್ವಾಸನೆಯನ್ನು ಅವರು ನೀಡಿದರು.