ಬಹು ನಿರೀಕ್ಷಿತ ‘ಮಾರ್ಟಿನ್’ (Martin) ಸಿನಿಮಾ ಅಕ್ಟೋಬರ್ 11ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಕುರಿತಂತೆ ಚಿತ್ರ ತಂಡದ ಉಪಸ್ಥಿತಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಒದಗಿಸಿರುವ ನಟ ಧ್ರುವ ಸರ್ಜಾ ‘ಮಾರ್ಟಿನ್’ (Martin) ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದರು. ಅಕ್ಟೋಬರ್ 11ರಂದು ಸಿನಿಮಾ ರಿಲೀಸ್ ಆಗಲಿದೆ ಎಂದರು.
ಸುಮಾರು ಎರಡೂವರೆ ವರ್ಷ ಈ ಸಿನಿಮಾ ನಿರ್ಮಾಣ ಕೆಲಸ ನಡೆದಿದೆ. ಇದು ತಂತ್ರಜ್ಞರ ಸಿನಿಮಾ ಆಗಿದ್ದು, ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾರ್ಟಿನ್ ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದು, ಎ.ಪಿ. ಅರ್ಜುನ್ ನಿರ್ದೇಶಿಸಿದ್ದಾರೆ.