ಮಂಗಳೂರು: ಇದು ದೇವರ ಭೂಮಿ, ಧಾರ್ಮಿಕ ನಗರ, ಜೈನ ಧರ್ಮದ ಪವಿತ್ರ ಧರ್ಮ, ಕಟೀಲ್ ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮಶ್ವರಿ ಅವರ ಆಶೀರ್ವಾದ ಈ ಭೂಮಿಯ ಮೇಲಿದೆ. ಇಲ್ಲಿ ಬಹಳ ಪುರಾತನ ಭೂಮಿಯಿಂದ ದೇಶಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ. ಎಲ್ಲರ ಜತೆಗೂಡಿ, ಎಲ್ಲರನ್ನೂ ಜತೆಗೂಡಿಸಿಕೊಂಡು ಎಳ್ಲಾ ಧರ್ಮಗಳನ್ನು ಗೌರವಿಸುತ್ತಾ ಮುಂದೆ ತಗೆದುಕೊಂಡು ಹೋಗುವ ಭೂಮಿ ಇದಾಗಿದೆ ಎಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಅವರು ದಕ್ಷಿಣ ಕನ್ನಡ ಬಗ್ಗೆ ಗುಣಗಾನ ಮಾಡಿದ್ದಾರೆ.
ದಕ್ಷಿಣ ಕನ್ನಡದ ಮೂಡುಬಿದರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಸತ್ಯ ನಮ್ಮ ಹೃದಯದಲ್ಲಿರಲಿ, ಸತ್ಯದ ಭಾವನೆಯಲ್ಲಿ ನಾವು ಸೇವೆ ಮಾಡಬೇಕು. ಸತ್ಯ ಹಾಗೂ ಸೇವೆ ಬಹಳ ದೊಡ್ಡ ವಿಚಾರ. ಇದು ಸಣ್ಣ ಪುಟ್ಟ ವಿಚಾರದಲ್ಲೂ ಅಡಗಿರುತ್ತದೆ. ತಾಯಿ ಮಕ್ಕಳನ್ನು ಆರೈಕೆ ಮಾಡುವಾಗ, ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಇದು ವ್ಯಕ್ತವಾಗುತ್ತದೆ. ಇದೂ ಕೂಡ ಒಂದರ್ಥದಲ್ಲಿ ಸೇವೆಯಾಗಿರುತ್ತದೆ. ಈ ಸೇವೆಯನ್ನು ಪರಿಶ್ರಮ ಹಾಗೂ ಹೆಮ್ಮೆಯಿಂದ ಮಾಡಲಾಗುತ್ತದೆ. ಇದು ನಿಮ್ಮ ಸಂಸ್ಕೃತಿ ಹಾಗೂ ಸಭ್ಯತೆ ಕಲಿಸಿರುತ್ತದೆ.
ಮೋದಿಯವರೇ,
ಕರ್ನಾಟಕದಲ್ಲಿ 4 ವರ್ಷಗಳಲ್ಲಿ 6487 ರೈತರು, 542 ಜನ ಬಡತನದಿಂದ, 1675 ಜನ ನಿರುದ್ಯೋಗದಿಂದ, 3734 ಜನ ಸಾಲ – ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಇಲ್ಲಿ 40% ಕಮಿಷನ್ ಸರ್ಕಾರ ಆತಂಕ ಸೃಷ್ಟಿಸಿದೆ.
– @priyankagandhi#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/gBsKNHkSET— Karnataka Congress (@INCKarnataka) May 7, 2023
ಬಹಳ ಪರಿಶ್ರಮ ಹಾಗೂ ಹೆಮ್ಮೆಯಿಂದ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡುತ್ತೀರಿ. ನಿಮ್ಮ ಕೆಲಸಗಳನ್ನು ನೀವು ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾಡಿದರೆ ಅದು ದೇಶ ನಿರ್ಮಾಣಕ್ಕೆ ಕೊಡುಗೆಯಾಗುತ್ತದೆ. ದೇಶ ನಿರ್ಮಾಣವಾದರೆ ಅದರ ನಿರ್ಮಾತೃ ನೀವೇ ಆಗಿರುತ್ತೀರಿ. ಇದು ಸರ್ಕಾರದ ಜವಾಬ್ದಾರಿಯೂ ಆಗಿರುತ್ತದೆ. ಹೀಗಾಗಿ ನಾವು ನೀವು ಸರ್ಕಾರದ ಮೇಲೆ ನಿಷ್ಠೆ ಹಾಗೂ ಪ್ರಾಮಾಣಿಕ ಕೆಲವನ್ನು ನಿರೀಕ್ಷೆ ಮಾಡುತ್ತೇವೆ. ಅದೇ ಆಧಾರದ ಮೇಲೆ ನಾವು ಚುನಾವಣೆ ಸಮಯದಲ್ಲಿ ಸರ್ಕಾರವನ್ನು ಚುನಾಯಿಸುತ್ತೇವೆ ಎಂದ ಅವರು, ಚುನಾವಣೆ ಸಮಯದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ನಿಮ್ಮ ಮುಂದೆ ಮಾತನಾಡುತ್ತಾರೆ. ಈ ಸಮಯದಲ್ಲಿ ನಾಯಕರುಗಳು ನಿಮ್ಮ ಜೀವನ ಹಾಗೂ ಸಮಸ್ಯೆಗಳ ಬಗ್ಗೆ ಅದಕ್ಕೆ ಪಕ್ಷಗಳು ರೂಪಿಸಿರುವ ಪರಿಹಾರಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇಟ್ಟುಕೊಂಡಿರುತ್ತೀರಿ. ಎರಡು ದಿನಗಳ ಹಿಂದೆ ಮೋದಿ ಅವರು ಇಲ್ಲಿಗೆ ಆಗಮಿಸಿ ಭಾಷಣ ಮಾಡಿದರು. ಅವರ ಭಾಷಣದಲ್ಲಿ ಅವರು ಭಯೋತ್ಪಾದಕ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದರು. ಆದರೆ ದು ಈ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಪ್ರಧಾನಮಂತ್ರಿಗಳು ತಪ್ಪು ಭಾವಿಸಿ ಇದರ ಬಗ್ಗೆ ಮಾತನಾಡಿರಬಹುದು ಎಂದು ಭಾವಿಸಿದೆ ಎಂದರು
LIVE: Smt @priyankagandhi ji addresses the public in Moodbidri, Karnataka.https://t.co/Ct8gvQXUfs
— Karnataka Congress (@INCKarnataka) May 7, 2023
ಮೋದಿ ಅವರು ನಿರುದ್ಯೋಗದ ಬಗ್ಗೆ ಮಾತನಾಡಲಿಲ್ಲ, ಬೆಲೆ ಏರಿಕೆ ಬಗ್ಗೆ ಮಾತನಾಡಲಿಲ್ಲ. ಕಾರಣ ಇವರ ಆಡಳಿತದಲ್ಲೇ ಈ ಸಮಸ್ಯೆಗಳು ಹೆಚ್ಚಾಗಿದ್ದು, ಇವುಗಳಿಗೆ ಪರಿಹಾರ ನೀಡಲು ಅವರ ಸರ್ಕಾರ ವಿಫಲವಾಗಿದೆ. ಅವರ ಆಡಳಿತದಲ್ಲಿ ಅಡುಗೆ ಅನಿಲ, ಬೇಳೆ ಕಾಳುಗಳು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಖರೀದಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಅವರು ಭಯೋತ್ಪಾದನೆ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ ಎಙದ ಅವರು, ಈ ರಾಜ್ಯದಲ್ಲಿ ಪ್ರತಿನಿತ್ಯ 5 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಲ್ಲಿ ಜನರಿಗೆ ಭಯವಿರುವುದು ನಿರುದ್ಯೋಗ, ಬೆಲೆ ಏರಿಕೆಯಿಂದಾಗಿ. 6400 ರೈತರು ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, 500ಕ್ಕೂ ಹೆಚ್ಚು ಜನ ಬಡತನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರುದ್ಯೋಗದಿಂದ 1600 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಮಂತ್ರಿಗಳೇ ಕರ್ನಾಟಕದಲ್ಲಿ ಭಯೋತ್ಪಾದನೆ ಆಗಿದ್ದರೆ ಅದು ನಿಮ್ಮದೇ ಸರ್ಕಾರದ 40% ಕಮಿಷನ್ ನಿಂದಾಗಿ. ಜನರನ್ನು ಲೂಟಿ ಮಾಡುತ್ತಿರುವ ನಿಮ್ಮದೇ ನಾಯಕರಿದ ಜನ ಭಯಗೊಂಡಿದ್ದಾರೆ. ರಾಜ್ಯದಲ್ಲಿ ಆತಂಕವಿದ್ದರೆ ಈ ವಿಚಾರಗಳಿಂದಾಗಿ ಆತಂಕವಿದೆ. ಪ್ರಧಾನಮಂತ್ರಿಗಳೇ ರಾಜ್ಯ ಸರ್ಕಾರದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ನಿಮ್ಮಿಂದ ಸಾಧ್ಯವಾಗದೇ, ರಾಜ್ಯದ ಲಕ್ಷಾಂತರ ಯುವಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಈ ಭಾಗದ ಜನ ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಕಟ್ಟಿದ್ದರು. ಆದರೆ ಈ ಸರ್ಕಾರಗಳು ಇವುಗಳನ್ನು ವಿಲೀನ ಮಾಡಿ ನಾಶ ಮಾಡಿವೆ. ನೆಹರೂ ಹಾಗೂ ಇಂದಿರಾ ಗಾಂಧಿ ಅವರು ನಿರ್ಮಿಸಿದ ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಅವರಿಗೆ ಮಾರಿದ್ದಾರೆ. ಈ ದೇಶದ ಎಲ್ಲಾ ಸಂಪತ್ತನ್ನು ಯಾಕೆ ಮಾರಿದ್ದಾರೆ? ಇದು ಭಯೋತ್ಪಾದನೆಯಲ್ಲದಿದ್ದರೆ ಮತ್ಯಾವುದು ಭಯೋತ್ಪಾದನೆ? ಇದು ಬಿಜೆಪಿಯ ಭ್ರಷ್ಟಾಚಾರದ ಭಯೋತ್ಪಾದನೆ ಎಂದ ಪ್ರಿಯಾಂಕಾ ಗಾಂಧಿ, ರಾಜಕಾರಣಿಗಳಿಗೆ ಅಧಿಕಾರ, ಹಾಗೂ ಹಣದ ಲಾಲಸೆ ತಲೆಗೇರಿದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಅವರು ಜನರ ಸಮಸ್ಯೆ ಬಗ್ಗೆ ಮಾತನಾಡದೇ ಕೇವಲ ಧರ್ಮ, ಜಾತಿಯ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಭಾವನೆಗಳ ಕೇರಳಿಸಿ, ತಾವು ಚುನಾವಣೆ ಗೆದ್ದರೆ ಕೆಲಸ ಮಾಡುವ ಯಾವುದೇ ಅಗತ್ಯವಿಲ್ಲ ಎಂಬ ಮನಸ್ಥಿತಿಗೆ ತಲುಪುತ್ತಾರೆ. ಚುನಾವಣೆ ನಮ್ಮ ಭವಿಷ್ಯ ಬದಲಿಸುವ ಸರ್ಕಾರ ಆರಿಸುವ ಒಂದು ಅವಕಾಶವಾಗಿರುತ್ತದೆ. ಈ ಅವಕಾಶವನ್ನು ನೀವು ಸದ್ಬಳಕೆ ಮಾಡಿಕೊಳ್ಳಿ ಎಂದರು.