ಮಂಗಳೂರು; ಕಳೆದ ಮೂರು ದಿನಗಳಿಂದ ನಗರದ ಯು.ಎಸ್.ಮಲ್ಯ, ಗೋಲ್ಡನ್ ಶಟ್ಲ್ ಅಕಾಡೆಮಿ ಹಾಗೂ ಕೆ.ಎಂ.ಸಿ.ಯ ಮರೀನಾ ಕ್ರೀಡಾಂಗಣಗಳಲ್ಲಿ ಕರ್ನಾಟಕ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ 825 ಕ್ರೀಡಾಪಟುಗಳು 20ಕ್ಕೂ ಹೆಚ್ಚು ವಿಭಾಗಗಳಲ್ಲಿ ಭಾಗವಹಿಸಿದ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‍ನ ಆಯೋಜಿಸಿದ ಮಂಗಳಾ ಕಪ್-2022 ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನ್‍ಮೆಂಟ್‍ಗೆ ತೆರೆ ಎಳೆಯಲಾಯಿತು.
ಭಾನುವಾರ ಯು.ಎಸ್. ಮಲ್ಯ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮುಕ್ಕ ಗ್ರೂಫ್‍ನ ಮುಖ್ಯಸ್ಥ ಕೆ.ಮಹಮ್ಮದ್ ಹಾರೀಸ್ ಮಾತನಾಡಿ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನ್‍ಮೆಂಟ್ ಆಯೋಜಿಸುವ ಮೂಲಕ ಬ್ಯಾಡ್ಮಿಂಟನ್ ಹೊಸ ಜೀವ ಸಿಕ್ಕಿದಂತಾಗಿದೆ. ಕ್ರೀಡಾಪಟುಗಳಿಗೆ ಹೊಸ ವೇದಿಕೆಯನ್ನು ನೀಡಿದಂತಾಗಿದೆ ಎಂದರು.
ದ.ಕ.ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‍ನ ಕಾರ್ಯದರ್ಶಿ ಐವಾನ್ ಪತ್ರಾವೋ ಮಾತನಾಡಿ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅವರು ಮಂಗಳಾ ಕಪ್ ಆಯೋಜಿಸುವ ಮೂಲಕ ಬರೀ ಮಂಗಳೂರಿಗೆ ಮಾತ್ರವಲ್ಲ ರಾಜ್ಯಕ್ಕೊಂದು ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಉಪಾಧ್ಯಕ್ಷ ಗಿರಿಧರ್ ಶೆಟ್ಟಿ, ಮಂಗಳೂರು ಎಂಆರ್‍ಪಿಎಲ್‍ನ ಎಚ್‍ಆರ್ ವಿಭಾಗ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‍ನ ಅಧ್ಯಕ್ಷ ಅಶೋಕ್ ಕುಮಾರ್ ಹೆಗ್ಡೆ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಾಧನೆಯನ್ನು ವಿವರಿಸಿದರು. ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‍ನ ಕಾರ್ಯದರ್ಶಿ ಶಿವಪ್ರಸಾದ್ ಪ್ರಭು, ಆಡಳಿತ ಸಮಿತಿಯ ಸಲಹೆಗಾರ ಪರಿಮೇಳಝಗನ್, ಸುಮಿತ್ ನಾಯಕ್ ಉಪಸ್ಥಿತರಿದ್ದರು
ಮಂಗಳಾ ಕಪ್ ವಿಜೇತರು:
- ವಿಭಾಗ-13 ಬಾಲಕರ ಸಿಂಗಲ್ಸ್‍ನಲ್ಲಿ ಸಾಯಿ ಪುಷ್ಕರ್(ಪ್ರ), ಅಮಿತ್ ರಾಜ್ ಎನ್(ದ್ವಿ), ಡಬ್ಬಲ್ಸ್‍ನಲ್ಲಿ ಅಮಿತ್ ರಾಜ್ ಎನ್ ಹಾಗೂ ಹಾರ್ದಿಕ್ ದಿವ್ಯಾನ್ಶಿ ( ಪ್ರ), ಸಂಭ್ರಮ್ ಹಾಗೂ ಶ್ಯಾಮ್(ದ್ವಿ),
- 13ರ ಬಾಲಕಿಯ ವಿಭಾಗದಲ್ಲಿ ರಿದಿಮಾ(ಪ್ರ), ಈಶಿಕಾ(ದ್ವಿ). ಡಬ್ಬಲ್ಸ್ ವಿಭಾಗದಲ್ಲಿ ಅಮೃತಾ, ರಿದಿಮಾ(ಪ್ರ), ಐಕ್ಯಾ ಶೆಟ್ಟಿ , ಕಾಶ್ವಿ ಬನ್ಸಾಲ್ (ದ್ವಿ).
- 16ರ ವಿಭಾಗದ ಬಾಲಕರಲ್ಲಿ ಅಭಿಷೇಕ್(ಪ್ರ), ಎಸ್‍ಪಿ ರೆಡ್ಡಿ(ದ್ವಿ), ಡಬ್ಬಲ್ಸ್‍ನಲ್ಲಿ ಕ್ಷಿತಿಜ್ ದೀಪಕ್, ಲಕ್ಷ್ ಚೆಂಗಪ್ಪ (ಪ್ರ), ಕ್ರಿಶ್ ಅಂಜನ್ ಹಾಗೂ ಸುಮಿತ್(ದ್ವಿ).
- 16ರ ಬಾಲಕಿಯರ ವಿಭಾಗದಲ್ಲಿ ಪ್ರೇರಣಾ(ಪ್ರ), ದೀಪಿಕಾ(ದ್ವಿ), ಡಬ್ಬಲ್ಸ್‍ನಲ್ಲಿ ದೀಪಿಕಾ, ಶ್ರವಂತಿ (ಪ್ರ), ಗೌರಿ, ಜಾಹ್ನವಿ(ದ್ವಿ).
- 19ರ ವಿಭಾಗದ ಬಾಲಕರಲ್ಲಿ ಆದಿತ್ಯಾ ದಿವಾಕರ್(ಪ್ರ), ಲವಾ.ಟಿ. ವೇದಕಲ್( ದ್ವಿ), ಡಬ್ಬಲ್ಸ್‍ನಲ್ಲಿ ಆದಿತ್ಯ ದಿವಾಕರ್, ಕಿಶಾಲ್ ಗಣಪತಿ(ಪ್ರ), ರೋಬಿನ್ಸ್ ವಿ. ರೋನಿ ಹಾಗೂ ಅಕ್ಷಿತ್ ಎಸ್(ದ್ವಿ),
- 19ರ ಬಾಲಕಿಯರ ವಿಭಾಗದಲ್ಲಿ ಗ್ಲೋರಿಯಾ ವಿ.ಎ(ಪ್ರ), ಪ್ರೇರಣಾ ಶೇಟ್( ದ್ವಿ), ಡಬ್ಬಲ್ಸ್‍ನಲ್ಲಿ ಗ್ಯಾನದಾ ಮತ್ತು ಸಾನಿಯಾ(ಪ್ರ), ದೀಪ್ತಾ ಎಸ್ ಮತ್ತು ರಿದುವರ್ಶಿನಿ(ದ್ವಿ),
- ಪುರುಷರ ಸಿಂಗಲ್ಸ್ ಡ್ಯಾನಿಯಲ್ ಫರೀದ್(ಪ್ರ) ಪ್ರಥ್ವಿ ಕೆ. ರಾಯ್( ದ್ವಿ),
- ಪುರುಷರ ಡಬ್ಬಲ್ಸ್‍ನಲ್ಲಿ ಪ್ರಕಾಶ್ ರಾಜ್ ಹಾಗೂ ಕುಶಾಲ್ ರಾಜ್(ಪ್ರ), ಪ್ರಥ್ವಿ ರಾಯ್ ಮತ್ತು ಶಶಾಂಕ್(ದ್ವಿ),
- ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರೇರಣಾ ಶೇಟ್(ಪ್ರ) ಗ್ಲೋರಿಯಾ(ದ್ವಿ)
- ಮಹಿಳೆಯರ ಡಬ್ಬಲ್ಸ್ ಓಪನ್‍ನಲ್ಲಿ ಗ್ಯಾನದಾ ಮತ್ತು ಸಾನಿಯಾ(ಪ್ರ) ಅನುಷಾ ಮತ್ತು ಯುವಶ್ರೀ(ದ್ವಿ).
- ಮಿಕ್ಸೆಡ್ ಡಬ್ಬಲ್‍ನಲ್ಲಿ ಅನುಷಾ ಮತ್ತು ಲೋಕೇಶ್ ವಿಶ್ವನಾಥ್(ಪ್ರ) ಗ್ಯಾನದಾ ಮತ್ತು ನಾಜೀರ್(ದ್ವಿ).
- ಮಹಿಳೆಯರ ಡಬ್ಬಲ್ಸ್ 30 ಪ್ಲಸ್‍ನಲ್ಲಿ ನಿಶ್ಚಿತಾ ಮತ್ತು ವರ್ಷಾ(ಪ್ರ) ಲಕ್ಷ್ಮಿ ಮತ್ತು ದೀಪ್ತಿ ಶೆಟ್ಟಿ (ದ್ವಿ).
- ಪುರುಷರ ಡಬ್ಬಲ್ಸ್ 35 ಪ್ಲಸ್‍ನಲ್ಲಿ ಗೋಪಿನಾಥ್ ಮತ್ತು ರಿಯಾಜ್ ಅಹಮ್ಮದ್(ಪ್ರ), ರಾಘವನ್ ಪಿ ಮತ್ತು ಸುನಿಲ್ ಗ್ಲ್ಯಾಡ್‍ಸನ್(ದ್ವಿ),
- ಪುರುಷರ ಡಬ್ಬಲ್ಸ್ 45 ಪ್ಲಸ್‍ನಲ್ಲಿ ಮಾರ್ಕೋಸ್ ಮತ್ತು ಝೇವಿಯರ್(ಪ್ರ), ಪಿ. ಕಾರ್ತಿಕ್ ಮತ್ತು ಸೆಂಥಿಲ್ ವೇಲನ್(ದ್ವಿ),