ಮುಂಬಯಿ: ಮಹಾರಾಷ್ಟ್ರದ ಬಿಜೆಪಿ ಸಚಿವ ಚಂದ್ರಕಾಙತ್ ಪಾಟರ್ ಅವರಿಗೆ ವ್ಯಕ್ತಿಯೊಬ್ಬ ಮಸಿ ಬಳಿದ ಘಟನೆ ಶನಿವಾರ ನಡೆದಿದೆ. ಪೈಠಾಣ ಬಳಿಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.
ಮಹಾರಾಷ್ಟ್ರದ ಪುಣೆ ಬಳಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಜನಸಂದಣಿ ನಡುವೆ ಪ್ರತ್ಯಕ್ಷನಾದ ವ್ಯಕ್ತಿ ಏಕಾಏಕಿ ಸಚಿವರ ಮುಖಕ್ಕೆ ಮಸಿ ಬಳಿದಿದ್ದಾನೆ. ಇದರಿಂದ ಗಲಿಬಿಲಿಗೊಂಡ ಸಚಿವರು ಆತನನ್ನು ತಳ್ಳಿ ದೂರ ಸರಿದಿದ್ದಾರೆ. ಕೂಡಲೇ ಸಚಿವರ ನೆರವಿಗೆ ಧಾವಿಸಿದ ಪೊಲೀಸರು, ಮಸಿ ಬಳಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೋಲಾಹಲದ ಪರಿಸ್ಥಿತಿ ಬಿರ್ಮಾಣವಾಗಿತ್ತು.
खतरनाक….😍#ChandrakantPatil pic.twitter.com/vQ6x8GGAkQ
— अभिजीत (@Abhijeet_9090) December 10, 2022























































