ಬೆಳಗಾವಿ: ಲೋಕಸಭಾ ಚುನಾವಣೆಯ ಪ್ರಚಾರದ ಅಖಾಡ ರಾಜಕೀಯ ಪಕ್ಷಗಳ ಭರ್ಜರಿ ಸೆಣಸಾಟಕ್ಕೆ ಸಾಕ್ಷಿಯಾಗುತ್ತಿದೆ. ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ನಡೆಯುವ ಉತ್ತರ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ನಡೆಸುತ್ತಿದೆ.
ಕುಂದಾನಗರಿಯಲ್ಲಿ ಮೋದಿಗೆ ಮಮತೆಯ ಉಡುಗೊರೆ !
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಇಂದು ಪ್ರಧಾನಿ ಶ್ರೀ @narendramodi ಅವರಿಗೆ ರೈತರ ಬದುಕಿನ ಜೀವಾಳವಾಗಿರುವ ಎತ್ತಿನಬಂಡಿ ಮತ್ತು ಮೋದಿ ಅವರ ಮಾತೃಶ್ರೀ ಅವರೊಂದಿಗಿನ ಸುಂದರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು.#PhirEkBaarModiSarkar… pic.twitter.com/V7ceC5nlis
— BJP Karnataka (@BJP4Karnataka) April 28, 2024
ಈ ನಡುವೆ, ಪ್ರಧಾನಿ ನರೇಂದ್ರ ಮೋದಿಯವರು ಕುಂದಾ ನಗರಿ ಬೆಳಗಾವಿಯಲ್ಲಿ ಭಾನುವಾರ ಸರಣಿ ಸಮಾವೇಶ ನಡೆಸಿ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿದರು. ಬೆಳಗಾವಿಯಲ್ಲಿ ನಡೆದ ‘ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ರೈತರ ಬದುಕಿನ ಜೀವಾಳವಾಗಿರುವ ಎತ್ತಿನಬಂಡಿ ಮತ್ತು ಮಾತೃಶ್ರೀ ಜೊತೆ ಮೋದಿ ಇರುವ ಸುಂದರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು. ಈ ಸಾನಿವೇಶ ಕುತೂಹಲದ ಕೇಂದ್ರಬಿಂದುವಾಯಿತು.

























































