ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ರಣತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಎರಡನೇ ಯಾದಿಯನ್ನು ಬಿಡುಗಡೆ ಮಾಡಿದೆ. ಜಾತಿ ಆಧಾರದಲ್ಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ತೀವ್ರ ಕುತೂಹಲ ಕೆರಳಿಸಿರುವ ದಸರಾ ನಗರಿಗಳಲ್ಲಿ ಅಚ್ಚರಿಯ ಹೆಸರುಗಳನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಮೈಸೂರಿನಲ್ಲಿ ರಾಜವಂಶಸ್ಥ ಯಧಯವೀರ್ ವಿರುದ್ದ ಎಂ.ಲಕ್ಷ್ಮಣ್ ಅವರನ್ನು ಹಾಗೂ ದಕ್ಷಿಣ ಕನ್ನಡದಲ್ಲಿ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ನಿರ್ಧರಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ಪರ್ಧಿಸಲಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವಿನೋದ್ ಅಸೂಟಿ ಅವರಿಗೆ ಟಿಕೆಟ್ ನೀಡಲಿರುವ ಕಾಂಗ್ರೆಸ್, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಯುವಮೋರ್ಚಾ ನಾಯಕ ತೇಜಸ್ವಿ ಸೂರ್ಯ ವಿರುದ್ದ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ. ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಪ್ರೊ.ರಾಜೀವ್ ಗೌಡ ಅವರ ಸ್ಪರ್ಧೆ ಖಚಿತವಾಗಿದೆ.
ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ:
-
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
-
ಬೆಂಗಳೂರು ಕೇಂದ್ರ -ಮನ್ಸೂರ್ ಅಲಿ ಖಾನ್
-
ಬೆಂಗಳೂರು ಉತ್ತರ – ಪ್ರೊ.ರಾಜೀವ್ ಗೌಡ
-
ದಕ್ಷಿಣ ಕನ್ನಡ – ಪದ್ಮರಾಜ್,,
-
ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ
-
ಮೈಸೂರು – ಎಂ.ಲಕ್ಷ್ಮಣ್
-
ಧಾರವಾಡ – ವಿನೋದ್ ಅಸೂಟಿ
-
ಚಿತ್ರದುರ್ಗ – ಚಂದ್ರಪ್ಪ
-
ರಾಯಚೂರು – ಕುಮಾರ ನಾಯ್ಕ್
-
ಬೆಳಗಾವಿ -ಮೃಣಾಲ್ ಹೆಬ್ಬಾಳ್ಕರ್
-
ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
-
ಬಾಗಲಕೋಟೆ – ಸಂಯುಕ್ತ ಶಿವಾನಂದ ಪಾಟೀಲ್
-
ಕೊಪ್ಪಳ – ರಾಜಶೇಖರ ಹಿಟ್ನಾಳ್
-
ಕಲಬುರಗಿ – ರಾಧಾಕೃಷ್ಣ ದೊಡ್ಮನಿ
-
ಬೀದರ್ – ಸಾಗರ್ ಖಂಡ್ರೆ
-
ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
-
ರ್ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್