ಬೆಂಗಳೂರು: ಗುತ್ತಿಗೆದಾರನ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆ ಕೇಳುವ ಬಿಜೆಪಿಗರು, ಮೊದಲು ಪೋಕ್ಸೋ ಪ್ರಕರಣದ ಆರೋಪ ಹೊತ್ತಿರುವ ಬಿಎಸ್‌ವೈ ಪುತ್ರ ವಿಜಯೇಂದ್ರರ ರಾಜೀನಾಮೆ ಕೊಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಬಿಜೆಪಿ ನಾಯಕರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ನಾನು ಅರೆಸ್ಸೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿದ್ದೇನೆ. ಹಾಗಾಗಿ ಬಿಜೆಪಿಯವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಆರ್‌ಎಸ್‌ಎಸ್ ಮತ್ತು ಮನುಸ್ಮೃತಿಯ ವಿರುದ್ಧ ಇದ್ದೇನೆ. ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಮತ್ತು ಸಂವಿಧಾನವನ್ನು ಅನುಸರಿಸುತ್ತೇವೆ. ಹಾಗಾಗಿ ಬಿಜೆಪಿಯವರು ನನ್ನನ್ನು ಇಂತಹ ವಿಚಾರಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾರೆ ಎಂದು ದೂರಿದರು.
ಸಂತ್ರಸ್ತರ ವಿಚಾರದಲ್ಲಿ ನ್ಯಾಯಕೊಡಿಸಬೇಕೆಂದು ಬಿಜೆಪಿಯವರಿಗೆ ಆಸಕ್ತಿ ಇದ್ದರೆ, ಬಿಎಸ್‌ವೈ ವಿರುದ್ದ ಪೋಕ್ಸೋ ದಾಖಲಾಗಿರುವುದರಿಂದ ಮೊದಲು ವಿಜಯೇಂದ್ರ ಅವರಿಂದ ರಾಜೀನಾಮೆ ಕೊಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ.


























































