ಭಾರತದ ಪಾಲಿಗೆ ಕರಾಳ ಶಾಸನ ಬರೆಯುತ್ತಿರುವ ಟ್ವಿಟ್ಟರ್.. ಶುಕ್ರವಾರ ಬರೋಬ್ಬರಿ 3,700 ಉದ್ಯೋಗಿಗಳ ವಜಾ.. ಸಾವಿರಾರು ಮಂದಿ ಭಾರತೀಯರನ್ನೂ ಅಪಮಾನವಾಗುವ ರೀತಿ ವಜಾ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ..
ಅಮೆರಿಕಾ: ಟ್ವಿಟರ್ ಒಡೆಯ ಎಲಾನ್ ಮಸ್ಕ್ ಅವರು ಭಾರತದ ಪಾಲಿಗೆ ಕರಾಳ ಶಾಸನ ಬರೆಯುತ್ತಿದ್ದಾರೆ. ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಅವರು ಖರೀದಿಸಿದ್ದೇ ತಡ, ಈ ವರೆಗೂ ಆ ಕಂಪನಿಯನ್ನು ಮುನ್ಬಢಸುತ್ತಿದ್ದ ಸಿಇಒ ಸಹಿತ ಪ್ರಮುಖರನ್ನು ವಜಾ ಮಾಡಲಾಗಿದೆ.
ಈ ಬೆಳವಣಿಗೆ ಭಾರೀ ಸುದ್ದಿಯಾಗುತ್ತಿದ್ದಂತೆಯೇ ವಜಾಗೊಂಡವರಿಗೆ ಪರಿಹಾರ ನೀಡುವ ಬಗ್ಗೆ ಮಾತುಗಳು ಕೇಳಿಬಂದವು. ಇದೀಗ ಮತ್ತೆ ಸಾವಿರಾರು ಮಂದಿ ಭಾರತೀಯರಿಗೆ ಟ್ವಿಟರ್ ಸಂಸ್ಥೆ ಗೇಟ್ ಪಾಸ್ ನೀಡಿದೆ ಎಂಬ ಸುದ್ದಿ ಔದ್ಯೋಗಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಸಂಸ್ಥೆ ಭಾರತ, ಅಮೆರಿಕ, ಲಂಡನ್ ಸೇರಿದಂತೆ ವಿವಿಧ ದೇಶಗಳಲ್ಲಿರುವ ತನ್ನ ಸಾವಿರಾರು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಶುಕ್ರವಾರ ಬರೋಬ್ಬರಿ 3,700 ಮಂದಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಉದ್ಯೋಗಿಗಳನ್ನು ವಜಾ ಮಾಡಿರುವ ಬೆಳವಣಿಗೆ ವ್ಯಾಪಕ ಅಸಮಾಧಾನಕ್ಕೂ ಕಾರಣವಾಗಿದೆ.
ಈ ನಡುವೆ, ಟ್ವಿಟರ್ ಪಾಲಿಗೆ ಭಾರತ ಕೂಡಾ ಒಂದು ದೊಡ್ಡ ಮಾರುಕಟ್ಟೆ. ಹೀಗಿದ್ದರೂ ಭಾರತ ಮೂಲದ ಉದ್ಯೋಗಿಗಳನ್ನು ಅವಮಾನವಾಗುವ ರೀತಿಯಲ್ಲಿ ಉದ್ಯೋಗದಿಂದ ವಜಾ ಮಾಡಿರುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
























































