ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಯಶೋಗಾಥೆ ಬರೆದಿದೆ. ಮಹತ್ವದ ಶಕ್ತಿ ಯೋಜನೆಯಡಿ ಈವರೆಗೂ ಮಹಿಳೆಯರು ಮಾಡಿದ ಪ್ರಯಾಣ ಸಂಖ್ಯೆ 200 ಕೋಟಿ ದಾಟಿದೆ.
ಜೂನ್ 11 ಕ್ಕೆ ಶಕ್ತಿ ಯೋಜನೆಯ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಚಾಲನೆ ಸಿಕ್ಕಿತ್ತು. ಅಲ್ಲಿಂದ ನಿತ್ಯ ಮಹಿಳೆಯರು ಉಚಿತ ಬಸ್ ಪ್ರಯಾಣ ಪಡೆಯುತ್ತಿದ್ದು, ಕೆಎಸ್ಸಾರ್ಟಿಸಿ ಮೂಲಗಳ ಪ್ರಕಾರ 200 ಕೋಟಿ ಮಹಿಳೆಯರು ಈ ವರೆಗೂ ಪ್ರಯಾಣಿಸಿದ್ದಾರೆ.
ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ನೀಡಿದಂತೆ, ಗೆದ್ದು ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಅಂದರೆ ಸರ್ಕಾರ ರಚನೆಯಾದ ಒಂದು ತಿಂಗಳೊಳಲ್ಲೇ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ‘ಶಕ್ತಿ ಯೋಜನೆ’ಗೆ ಚಾಲನೆ ನೀಡಲಾಗಿತ್ತು.
ಜೂನ್ 11 ರಂದು ಈ ಯೋಜನೆ ರಾಜ್ಯಾದ್ಯಂತ ಆರಂಭವಾಗಿದ್ದು, ಮೊದಲ ದಿನವೇ ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡಿ ಯೋಜನೆ ಬಗ್ಗೆ ಶಹಬ್ಬಾಸ್‌ಗಿರಿ ನೀಡಿದ್ದರು. ಆ ಬಳಿಕ ದಿನೇ ದಿನೇ ಮಹಿಳಾ ಪ್ರಯಾಣಿಕರ ಸಂಖ್ಯೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹೆಚ್ಚಳವಾಗುತ್ತಲೆ ಇದೆ. ಇದೀಗ ಪ್ರಯಾಣ ಸಂಖ್ಯೆ 200 ಕೋಟಿ ದಾಟಿರುವುದು ಅಚ್ಚರಿಯ ದಾಖಲೆ.