ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ’ಶಕ್ತಿ’ ಯೋಜನೆ ಜಾರಿಯಾಗಿದ್ದು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಲಭಿಸಿದೆ. ಈ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.
ಇದೇನು ಮದುವೆ ಕರೆಸಿಕೊಂಡ ಜನ ಅಲ್ಲ ರೀ
ಹುಕ್ಕೇರಿ ಬಸ್ ಸ್ಟ್ಯಾಂಡ್ .!🙆 pic.twitter.com/Cia6YwmCzF— Namo Mahantesh Maganur 🇮🇳🚩 (@MahanteshMagan2) June 18, 2023
ಬಹುತೇಕ ಸಾರಿಗೆ ಸಂಸ್ಬ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು ರಾಜ್ಯದ ಪುಣ್ಯಕ್ಷೇತ್ರಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪ್ರಮುಖ ಬಸ್ಸು ನಿಲ್ದಾಣಗಳೂ ಪ್ರಯಾಣಿಕರ ನೂಕುನುಗ್ಗಲಿನ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ.
ಅವಸ್ಥೆ ನೋಡಿ !🙂
ಮೈಸೂರು ಬಸ್ ಸ್ಟ್ಯಾಂಡಂತೆ 🙄😁 pic.twitter.com/YG47eHHpCg— RAVI N DEVADIGA (@RAVINDEVADIGA1) June 18, 2023
ಈ ನಡುವೆ,ಉಚಿತ ಬಸ್ ಪ್ರಯಾಣದ ಸೌಲಭ್ಯವು ಅವಾಂತರಗಳಿಗೂ ಸಾಕ್ಷಿಯಾಗುತ್ತಿದೆ. ಫ್ರಿ ಪ್ರಯಾಣ ಹಿನ್ನೆಲೆ ಬಸ್ ಹತ್ತಲು ನೂಕು ನುಗ್ಗಲು ಉಙಟಾಗಿ, ಎಳೆದಾಟದಲ್ಲಿ ಕೆಎಸ್ಸಾರ್ಟಿಸಿ ಬಸ್‌ನ ಬಾಗಿಲು ಮುರಿದುಬಿದ್ದ ಘಟನೆ ಮಂಡ್ಯ ಬಳಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿರುವ ಘಟನೆಯಂತೆ
ಸಿದ್ದರಾಮಯ್ಯರೇ,,,KSRTC ಬಸ್ಸುಗಳನ್ನು ಕಾಪಾಡಿ ಪ್ಲೀಸ್ 🙏 pic.twitter.com/a6IWIkfbcc
— 🇮🇳 Madhukumar.V.P🇮🇳 ( MODI KA PARIVAR ) (@MadhukumarVP1) June 19, 2023
ಕೊಳ್ಳೆಗಾಲದ ಬಸ್ ನಿಲ್ದಾಣದಲ್ಲಿ ಜನರ ನೂಕಾಟಕ್ಕೆ ಸಾರಿಗೆ ಸಂಸ್ಥೆ ಬಸ್‌ನ ಬಾಗಿಲು ಕಿತ್ತು ಬಂದ ಘಟನೆ ಬೆನ್ನಲ್ಲೇ, ಮಳವಳ್ಳಿಯಲ್ಲೂ ಘಟನೆ ಮರುಕಳಿಸಿದೆ.




















































