ಬೆಂಗಳೂರು: ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕೆಎಸ್ಸಾರ್ಟಿಸಿಯ ಪ್ರಥಮ ಅಂತರ-ನಗರ (Prototype ) ಎಲೆಕ್ಟ್ರಿಕ್ ಬಸ್ ಬಸ್ ಸಂಚಾರಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಹಸಿರು ನಿಶಾನೆ ತೋರಿಸಿದರು.

-
ಇದೇ ವೇಳೆ, ಸಾರಿಗೆ ನಿಮದ ಮಹತ್ವಾಕಾಂಕ್ಷೆಯ ಹಲವು ಕಾರ್ಯಕ್ರಮಗಳಿಗೆ ಸಚಿವರು ಹಾಗೂ ಗಣ್ಯರು ಚಾಲನೆ ನೀಡಿದರು.
-
ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬದ ಅವಲಂಭಿತರಿಗೆ ಅಪಘಾತ ಪರಿಹಾರ ವಿಮಾ ಸೌಲಭ್ಯದ 1 ಕೋಟಿ ರೂಪಾಯಿ ಚೆಕ್ ನೀಡುವ ಕಾರ್ಯಕ್ರಮ ಜಾರಿಗೊಳಿಸಲಾಯಿತು.
-
ಅಂತರ ನಿಗಮ ವರ್ಗಾವಣೆ 1013 ನೌಕರರಿಗೆ ವರ್ಗಾವಣೆ ಆದೇಶ ನೀಡವ ಪ್ರಕ್ರಿಯೆಗೆ ಮುನ್ನುಡಿ ಬರೆಯಾಲಾಯಿತು.
-
ನಿಗಮದ ಅಂತರಿಕ ನಿಯತಕಾಲಿಕ ‘ಸಾರಿಗೆ ಸಂಪದ” ಬಿಡುಗಡೆ ಮಾಡಲಾಯಿತು.

ಈ ನಡುವೆ, ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬದ ಅವಲಂಭಿತರಿಗೆ ಅಪಘಾತ ಪರಿಹಾರ ವಿಮಾ ಸೌಲಭ್ಯ ರೂ.1 ಕೋಟಿ ಚೆಕ್ ನೀಡುವ ನಿಗಮದ ಕ್ರಮ ನೌಕರ ಸಮೂಹದಲ್ಲಿ ಆಶಾಕಿರಣ ಮೂಡಿಸಿದೆ.
ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ ರೂ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ವಾರ್ಷಿಕ 885 ರೂಪಾಯಿ ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ ರೂ.50 ಲಕ್ಷಗಳ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಅಪಘಾತ ವಿಮಾ ಯೋಜನೆ ಸಂಬಂಧ ಕೆಎಸ್ಆರ್‌ಟಿಸಿ ಹಾಗೂ SBI ಜೊತೆ ಅಕ್ಟೋಬರ್19ರಂದು ಹಾಗೂ ಯುನೈಟೆಡ್ ಇಂಡಿಯಾ ಇನ್ಸುರೆನಸ್ ಕಂಪನಿ ಜೊತೆ ನವೆಂಬರ್ 14ರಂದು ಒಡಂಬಡಿಕೆ ಮಾಡಲಾಗಿತ್ತು. ಈ ಯೋಜನೆಯ ಜಾರಿಯ ಆರಂಭದಲ್ಲಿ, ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಚಿತ್ರದುರ್ಗ ಘಟಕದ ನೌಕರ, ನಿಗಮದ ಚಾಲಕರಾದ ಜೆ.ಎಸ್. ಉಮೇಶ್ ಅವರ ಕುಟುಂಬದ ಸದಸ್ಯರಿಗೆ .1 ಕೋಟಿ ರೂಪಾಯಿ ಚೆಕ್ ವಿತರಿಸಲಾಗುತ್ತಿದೆ
ಇದೇ ಸಂದರ್ಭದಲ್ಲಿ, ಅಂತರ್ ನಿಗಮ 1013 ನೌಕರರಿಗೆ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಲಾಗಿದೆ. 1013 ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣಾ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ ಯಿಂದ ನೂತನ ಎಲೆಕ್ಟ್ರಿಕ್ ಬಸ್ ಪ್ರಾರಂಭ. pic.twitter.com/JGnQKOLiWn
— KSRTC (@KSRTC_Journeys) December 31, 2022
ಈ ನಡುವೆ, ಆಂತರಿಕ ನಿಯತ ಕಾಲಿಕೆ ‘ಸಾರಿಗೆ ಸಂಪದ’ ಬಿಡುಗಡೆ ಮಾಡಲಾಗಿದೆ. ನಿಗಮದ ಕಾರ್ಯಚಟುವಟಿಕೆಗಳು, ಜಾರಿಗೊಳಿಸಲಾದ ಕಾರ್ಮಿಕ ಕಲ್ಯಾಣ ಯೋಜನೆಗಳು, ವಿನೂತನ ಕಾರ್ಯಕ್ರಮ, ನೂತನ ಅವಿಷ್ಕಾರ, ವಿಷಯಗಳನ್ನು ಒಳಗೊಂಡ ಆಂತರಿಕ ನಿಯತಕಾಲಿಕ “ಸಾರಿಗೆ ಸಂಪದ” ವನ್ನು ಬಿಡುಗಡೆ ಮಾಡಲಾಗಿದ್ದು ಈ ನಿಯತಕಾಲಿಕವನ್ನು ನಿಗಮದ ಸಮಸ್ತ ಸಿಬ್ಬಂದಿಗಳಿಗೂ ಮಾಹಿತಿಗಾಗಿ ವಿತರಿಸಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.
























































